Saturday, September 19, 2026

BDA Apartments

ನೂತನ ಸಚಿವರಾಗಿ ಅಜಯ್ ಸಿಂಗ್, ಹೆಚ್ ಸಿ ಬಾಲಕೃಷ್ಣ ಪ್ರಮಾಣ ವಚನ ಸ್ವೀಕಾರ BDA JK_Adv BD...
Home Front Page ನೂತನ ಸಚಿವರಾಗಿ ಅಜಯ್ ಸಿಂಗ್, ಹೆಚ್ ಸಿ ಬಾಲಕೃಷ್ಣ ಪ್ರಮಾಣ ವಚನ ಸ್ವೀಕಾರ

ನೂತನ ಸಚಿವರಾಗಿ ಅಜಯ್ ಸಿಂಗ್, ಹೆಚ್ ಸಿ ಬಾಲಕೃಷ್ಣ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು,ಆಗಸ್ಟ್,3,2026 (www.justkannada.in):  ಇಂದು ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು  ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದು ನೂತನ ಸಚಿವರಾಗಿ  ಜೇವರ್ಗಿ ಶಾಸಕ ಅಜಯ್ ಸಿಂಗ್ ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ,  ಕೆಸ್ ಬಸವಂತಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾ ವಿಧಿ ಬೋಧಿಸಿದರು.   ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಂದುವರೆದಿದೆ.ನೂತನ ಸಚಿವರಾಗಿ ಅಜಯ್ ಸಿಂಗ್ jk02_new jk02 new

ಸಮಾರಂಭದಲ್ಲಿ ಸಿಎಂ ಡಿಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್  ಭಾಗಿಯಾಗಿದ್ದಾರೆ.

Key words: Ajay Singh, HC Balakrishna, take oath , new ministers