Sunday, September 6, 2026

BDA Apartments

Home Front Page ಬಿಜೆಪಿಯಿಂದ KPCC ಕಚೇರಿಗೆ ಮುತ್ತಿಗೆಗೆ ಯತ್ನ: ಶಾಸಕನ ಮೇಲೆ ಮೊಟ್ಟೆ ಎಸೆತ

ಬಿಜೆಪಿಯಿಂದ KPCC ಕಚೇರಿಗೆ ಮುತ್ತಿಗೆಗೆ ಯತ್ನ: ಶಾಸಕನ ಮೇಲೆ ಮೊಟ್ಟೆ ಎಸೆತ

ಬೆಂಗಳೂರು,ಜುಲೈ,22,2026 (www.justkannada.in):  ನೀಟ್ ಅಕ್ರಮ , ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿಚಾರ್ಜ್ ಖಂಡಿಸಿ ಬಿಜೆಪಿ ಕಚೇರಿ ಮೇಲೆ ಕಾಂಗ್ರೆಸ್ ಯುವ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಬೆನ್ನಲ್ಲೆ ಇದೀಗ ಬಿಜೆಪಿಯೂ ಸಹ ಕೆಪಿಸಿಸಿ ಕಚೇರಿಗೆ ಮುತ್ತಿಗೆಗೆ ಯತ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ನಿವಾಸದ ಬಳಿ ಪ್ರತಿಭಟನೆ ನಡೆಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ರಾಜ್ಯ ಬಿಜೆಪಿ ನಾಯಕರು, ಕಾರ್ಯಕರ್ತರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿ ಬಿಜೆಪಿ ಕಾರ್ಯಕರ್ತರನ್ನ ವಾಪಸ್ ಕಳುಹಿಸಿದ್ದಾರೆ.

ಇದೇ ವೇಳೆ ಬಿಜೆಪಿ ಶಾಸಕ ಬಿ.ಪಿ ಹರೀಶ್ ಮೇಲೆ ಮೊಟ್ಟೆ ಎಸೆಯಲಾಗಿದೆ. ಬಿಜೆಪಿ ನಾಯಕ ತಮ್ಮೇಶ್ ಗೌಡ ಕಾರಿನ ಮೇಲೂ ಮೊಟ್ಟೆ ಎಸೆಯಲಾಗಿದೆ. ಈ ಮೂಲಕ ನೀಟ್ ಅಕ್ರಮದ ಹೋರಾಟ ತೀವ್ರ ಸ್ವರೂಪ ಪಡೆದಿದೆ.

Key words: BJP, attempts , KPCC office, Egg, thrown, MLA