Friday, October 2, 2026

BDA Apartments

Home Front Page ಬಿಎಲ್ ಒಗಳು ಮನೆ ಮನೆಗೆ ಹೋಗಿ ಅರ್ಜಿ ವಿತರಣೆ  ಮಾಡಿ- ರಾಜ್ಯ ಮುಖ್ಯ ಚುನಾವಣಾ ಆಯುಕ್ತರ...

ಬಿಎಲ್ ಒಗಳು ಮನೆ ಮನೆಗೆ ಹೋಗಿ ಅರ್ಜಿ ವಿತರಣೆ  ಮಾಡಿ- ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಖಡಕ್ ಸೂಚನೆ

ಬೆಂಗಳೂರು,ಜುಲೈ,3,2026 (www.justkannada.in): ಮನೆ ಮನೆಗೆ ಬಿಎಲ್ ಒಗಳು ಭೇಟಿ ನೀಡದೇ ಕಲ್ಯಾಣ ಮಂಟಪ, ಮಸೀದಿ, ಒಂದೇ ಮನೆಯಲ್ಲಿ ಕೂತು ಎಸ್ ಐಆರ್ ಅರ್ಜಿ ಭರ್ತಿ ಮಾಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಎಲ್ ಒಗಳು ಮನೆ ಮನೆಗೆ ಹೋಗಿ ಅರ್ಜಿ ವಿತರಣೆ ಮಾಡಬೇಕು ಎಂದು  ರಾಜ್ಯ ಮುಖ್ಯ ಚುನಾವಣಾಧಿಕಾರಿ  ಅನ್ಬುಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮನೆ ಮನೆಗೆ ಬಿಎಲ್ ಒಗಳು ಭೇಟಿ ನೀಢುತ್ತಿಲ್ಲ ಎಂಬ ದೂರು, ರಾಜ್ಯ ಚುನಾವಣಾ ಆಯೋಗಕ್ಕೆ ಹಲವು ದೂರುಗಳು ಸಲ್ಲಿಕಯಾದೆ ಹಿನ್ನೆಲೆ ಡಿಸಿ,  ಆಯುಕ್ತರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲೆ ಗ್ರೇಟರ್ ಬೆಂಗಳೂರು ಬೆಂಗಳೂರು ಉತ್ತರದಲ್ಲಿ ಈ ರೀತಿಯಾಗುತ್ತಿದೆ. ಮನೆ ಮನೆಗೆ ಹೋಗಿ ಮಾಹಿತಿ ಪಡೆಯಬೇಕು ಬಿಎಲ್ ಒಗಳು ಮನೆ ಮನೆಗೆ ಹೋಗಿ ಅರ್ಜಿ ವಿತರಣೆ ಮಾಡಿ- ರಾಜ್ಯ ಮುಖ್ಯ ಚುನಾವಣಾ ಆಯ...

ಬಿಎಲ್ ಒಗಳು ಮನೆ ಮನೆಗೆ ಹೋಗಿ ಅರ್ಜಿ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕಚೇರಿಗಳಿಂದ ಫಾರಂ ವಿತರಿಸುವಂತಿಲ್ಲ. ಬಿಎಲ್ ಒಗಳು ಕಡ್ಡಾಯವಾಗಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ಭೇಟಿ ನೀಡಲೇಬೇಕು.  ಚುನಾವಣಾ ಆಯೋಗದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ ಎಂದು ಚುನಾವಣಾಧಿಕಾರಿಗಳಿಗೆ ಅನ್ಬು ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.ಬಿಎಲ್ ಒಗಳು ಮನೆ ಮನೆಗೆ ಹೋಗಿ ಅರ್ಜಿ ವಿತರಣೆ ಮಾಡಿ jk02_new jk02 new

Key words:   SIR, BLOs, applications, State, Chief Election Commissioner