ಕರ್ನಾಟಕ ಡ್ರಗ್ಸ್ ಕ್ಯಾಪಿಟಲ್ ಆಗುತ್ತಿದೆ, ಆ ಕಡೆ ಗಮನ ಹರಿಸಿ- MLC  ಸಿ.ಟಿ ರವಿ ತಿರುಗೇಟು

ಬೆಂಗಳೂರು,ಜೂನ್,23,2026 (www.justkannada.in): ಆರ್ ಎಸ್ ಎಸ್ ನೋಂದಣಿ ವಿಚಾರದಲ್ಲಿ ದಾಖಲೆ ಕೊಡದೆ ಕಾನೂನು ಮೀರುವಂತಿಲ್ಲ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಎಂಎಲ್ ಸಿ  ಸಿ.ಟಿ ರವಿ, ಕರ್ನಾಟಕ ಡ್ರಗ್ಸ್ ಕ್ಯಾಪಿಟಲ್ ಆಗುತ್ತಿದೆ ಅ ಕಡೆ ಗಮನ ಹರಿಸಲಿ ಅವರಿಗೆ ಮಾಡಲು ತುಂಬಾ ಕೆಲಸಗಳಿವೆ ಆ ಕಡೆ ಗಮನ ಹರಿಸಲಿ ಎಂದು ಟಾಂಗ್ ಕೊಟ್ಟರು.

ಬಾಂಗ್ಲಾ ವಲಸಿಗರು ರಾಜ್ಯದ ಕಡೆ ಬರುತ್ತಿರುವ ಮಾಹಿತಿ ಇದೆ. ಭಯೋತ್ಪಾದಕರ ಸ್ಲೀಪರ್ ಸೆಲ್ ರೀತಿ ಕರ್ನಾಟಕ ಬಳಕೆಯಾಗುತ್ತಿದೆ. ಹೀಗಾಗಿ ಮೊದಲು ಪ್ರಿಯಾಂಕ್ ಖರ್ಗೆ ಆ ಕಡೆ ಗಮನಹರಿಸಲಿ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.

Key words: Karnataka, drugs capital, Priyank kharge, MLC, CT Ravi