Friday, September 25, 2026

BDA Apartments

ಸಿಎಂ ಡಿಕೆಶಿ ಒಕ್ಕಲಿಗರ ಲೀಡರ್ ಆಗಬಾರದೆಂದು ಟೌನ್ ಶಿಪ್ ಗೆ HDK ವಿರೋಧ- ಸಚಿವ ಎಂ...
Home Front Page ಸಿಎಂ ಡಿಕೆಶಿ ಒಕ್ಕಲಿಗರ ಲೀಡರ್ ಆಗಬಾರದೆಂದು ಟೌನ್ ಶಿಪ್ ಗೆ  HDK ವಿರೋಧ- ಸಚಿವ ಎಂ.ಬಿ...

ಸಿಎಂ ಡಿಕೆಶಿ ಒಕ್ಕಲಿಗರ ಲೀಡರ್ ಆಗಬಾರದೆಂದು ಟೌನ್ ಶಿಪ್ ಗೆ  HDK ವಿರೋಧ- ಸಚಿವ ಎಂ.ಬಿ ಪಾಟೀಲ್

ವಿಜಯಪುರ,ಜೂನ್,23,2026 (www.justkannada.in):  ಬಿಡದಿ ಟೌನ್ ಶಿಪ್ ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರೋಧಿಸುತ್ತಿರುವುದು ಇದೆಲ್ಲಾ ನಾಟಕ. ಸಿಎಂ ಡಿಕೆ ಶಿವಕುಮಾರ್ ಒಕ್ಕಲಿಗರ ಲೀಡರ್ ಆಗಬಾರದೆಂದು ಈ ರೀತಿ ಮಾಡುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರದಲ್ಲಿ ಹೆಚ್ ಡಿಕೆ ರಾಜಕೀಯ ಮಾಡುತ್ತಿದ್ದಾರೆ. ಬಿಡದಿ ಟೌನ್ ಶಿಪ್ ಪ್ರಾರಂಭಿಸಿದ್ದೇ ಹೆಚ್ ಡಿಕೆ ಈಗೇಕೆ ವಿರೋಧ? ಇದರಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಅವರ 100 ಎಕರೆ ಜಮೀನಿದೆ.  ಬಿಡದಿ ಟೌನ್  ಶಿಪ್ ಗೆ ಈಗ ವಿರೋಧ ಮಾಡುತ್ತಿರುವುದು ಇದೆಲ್ಲಾ ನಾಟಕ ಎಂದರು.ಸಿಎಂ ಡಿಕೆಶಿ ಒಕ್ಕಲಿಗರ ಲೀಡರ್ ಆಗಬಾರದೆಂದು ಟೌನ್ ಶಿಪ್ ಗೆ HDK ವಿರೋಧ hdk-dks hdk dks

ಡಿಕೆ ಶಿವಕುಮಾರ್  ಅವರು ಸಿಎಂ ಆಗಿದ್ದಾರೆ ಅಂತಾ ಇದೆಲ್ಲ ನಾಟಕ ಮಾಡುತ್ತಿದ್ದಾರೆ. ಸಿಎಂ ಡಿಕೆಶಿ ಒಕ್ಕಲಿಗರ ಲೀಡರ್ ಆಗಬಾರದೆಂದು ಇದೆಲ್ಲಾ ನಡೆಸಿದ್ದಾರೆ.  ರೈತರ ವಿರೋಧವಿದ್ದರೆ ಓಕೆ.  ಆದರೆ ರಾಜಕೀಯಕ್ಕಾಗಿ ಇದನ್ನ ಮಾಡುತ್ತಿದ್ದಾರೆ ಹೆಚ್ ಡಿಕೆ ಅವರು ಆಗಲೇ ಏಕೆ ನೋಟಿಫಿಕೇಷನ್ ವಾಪಸ್ ಪಡೆಯಲಿಲ್ಲ.  ಆಗ ತಾವೇ ಮಾಡಿ ಈಗ ರಾಜಕೀಯಕ್ಕೆ ವಿರೋಧ ಮಾಡುತ್ತಿದ್ದಾರೆ  ಎಂದು ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದರು.ಸಚಿವ ಎಂ.ಬಿ ಪಾಟೀಲ್ jk02_new jk02 new

Key words: HDK, opposes, township, Minister, M.B. Patil