Thursday, September 24, 2026

BDA Apartments

Home Front Page ಅಡ್ಡ ಮತದಾನ: ಬಿವೈವಿ, ಆರ್.ಅಶೋಕ್ ಗೆ ಮಹತ್ವದ​​ ಸೂಚನೆ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್

ಅಡ್ಡ ಮತದಾನ: ಬಿವೈವಿ, ಆರ್.ಅಶೋಕ್ ಗೆ ಮಹತ್ವದ​​ ಸೂಚನೆ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್

ನವದೆಹಲಿ, ಜೂನ್,​​ 23,2026 (www.justkannada.in): ವಿಧಾನ ಪರಿಷತ್​ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಅಡ್ಡಮತದಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ತುರ್ತಾಗಿ ವರದಿ ನೀಡುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸೂಚಿಸಿದ್ದಾರೆ.

ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಎಂಎಲ್ ಸಿ ರವಿಕುಮಾರ್,  ನವೀನ್ ಕುಮಾರ್ ಸಾಥ್ ನೀಡಿದರು.

ಅಡ್ಡಮತದಾನ ​​ ಸಂಬಂಧ ಜೂನ್ 25ರ ಒಳಗೆ ತುರ್ತಾಗಿ ಸಂಪೂರ್ಣ ವರದಿ ನೀಡಲು ಸಿ.ಟಿ.ರವಿ ಸಮಿತಿಗೆ ಸೂಚಿಸಿದ್ದು,  ಆರ್ ಅಶೋಕ್​​ ಮತ್ತು ವಿಜಯೇಂದ್ರ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸ್ಪಷ್ಟ ಮಾಹಿತಿ ನೀಡಿದ್ದಾರೆ.ಅಡ್ಡ ಮತದಾನ: ಬಿವೈವಿ, ಆರ್.ಅಶೋಕ್ ಗೆ ಮಹತ್ವದ​​ ಸೂಚನೆ ನೀಡಿದ ಬಿಜೆಪಿ ರಾಷ್ಟ್...

ವರದಿಯಲ್ಲಿ ಅಡ್ಡಮತದಾನ ಮಾಡಿದ ಶಾಸಕರ ಹೆಸರು ಸಮೇತ ಮಾಹಿತಿ ನೀಡುವ ಜೊತೆಗೆ ಕ್ರಾಸ್​​ ವೋಟಿಂಗ್​​ ಮಾಡಿದ ಕಾರಣವನ್ನೂ ವಿವರವಾಗಿ ನೀಡುವಂತೆ ನಿತಿನ್​​ ನಬಿನ್​​ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ. ಪ್ರಕರಣವನ್ನು ಬಿಜೆಪಿ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದ್ದು, ಸಮಿತಿ ನೀಡುವ ವರದಿ ಆಧರಿಸಿ ತುರ್ತು ಕ್ರಮ ಕೈಗೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.ಅಡ್ಡ ಮತದಾನ jk02_new jk02 new

Key words: Cross-voting, BJP, National President, Nitin Nabin, BY Vijayendra, R. Ashok