Wednesday, September 23, 2026

BDA Apartments

Home Front Page ಆರ್ ಎಸ್ ಎಸ್ ನವರು ದಾಖಲೆ ಕೊಡದೇ ಕಾನೂನು ಮೀರುವಂತಿಲ್ಲ-ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಆರ್ ಎಸ್ ಎಸ್ ನವರು ದಾಖಲೆ ಕೊಡದೇ ಕಾನೂನು ಮೀರುವಂತಿಲ್ಲ-ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜೂನ್,23,2026 (www.justkannada.in):  ಆರ್ ಎಸ್ ಎಸ್ ನೋಂದಣಿ ಬಗ್ಗೆ ಮಾಹಿತಿ ನೀಡುವಂತೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಬಾಗವತ್ ಅವರಿಗೆ ಪತ್ರ ಬರೆದಿದ್ದ  ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ಈ ಕುರಿತು ಮತ್ತೆ ಪ್ರಸ್ತಾಪಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್ ನೋಂದಣಿ ಬಗ್ಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದೇನೆ . ಇದೇ ಅಂತಿಮ ಅಲ್ಲ. ಅವರು ಉತ್ತರ ಕೊಡಲಿ. ತಾಳ್ಮೆಯಿಂದ ಕಾಯೋಣ ಎಂದರು.

ಆರ್ ಎಸ್ ಎಸ್ ನವರು ದಾಖಲೆ ಕೊಡದೆ ಕಾನೂನು ಮೀರುವಂತಿಲ್ಲ.   ಅವರು ದಾಖಲೆ ಕೊಡದೇ  ಕಾನೂನು ಚೌಕಟು ಮೀರಲು ನಾನು ಬಿಡಲ್ಲ.  ಆರ್ ಎಸ್ ಎಸ್ ಬಳಿ ದಾಖಲೆ ಇದ್ದಿದ್ದರೇ ನನ್ನ ಮುಖಕ್ಕೆ ಎಸೆಯುತ್ತಿದ್ದರು ಎಂದು ಪ್ರಿಯಾಂಕ್ ಖರ್ಗೆ ಕುಟುಕಿದರು.ಆರ್ ಎಸ್ ಎಸ್ ನವರು ದಾಖಲೆ ಕೊಡದೇ ಕಾನೂನು ಮೀರುವಂತಿಲ್ಲ jk02_new jk02 new

Key words: RSS, Registration, Home Minister, Priyank Kharge