Wednesday, September 23, 2026

BDA Apartments

Home Front Page ಬೆಂ-ಮೈ ಹೆದ್ದಾರಿಯ ಟೋಲ್ ಬಳಿ ರೈತರಿಂದ ಬೃಹತ್ ಪ್ರತಿಭಟನೆ

ಬೆಂ-ಮೈ ಹೆದ್ದಾರಿಯ ಟೋಲ್ ಬಳಿ ರೈತರಿಂದ ಬೃಹತ್ ಪ್ರತಿಭಟನೆ

ಮಂಡ್ಯ,ಜೂನ್,23,2026 (www.justkannada.in):  ಕೃಷಿ ಉತ್ಪನ್ನ ವಾಹನಗಳಿಗೆ ಟೋಲ್ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದ ಗಣಂಗೂರು ಟೋಲ್ ಗೇಟ್ ಬಳಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಕಾನೂನು ಬಾಹಿರವಾಗಿ ರೈತರಿಂದ ಟೋಲ್ ಸಂಗ್ರಹ  ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಟೋಲ್ ಗೆ ಆಗಮಿಸಿ ಟೋಲ್ ಸ್ಟಿಕ್ ಮುರಿದು, ಕೃಷಿ ಉತ್ಪನ್ನ ವಾಹನಗಳನ್ನ ಟೋಲ್ ಸಂಗ್ರಹಿಸದೇ ಉಚಿತವಾಗಿ ಬಿಟ್ಟು ಹೆದ್ದಾರಿ ಪ್ರಾಧಿಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬೆಂ-ಮೈ ಹೆದ್ದಾರಿಯ ಟೋಲ್ ಬಳಿ ರೈತರಿಂದ ಬೃಹತ್ ಪ್ರತಿಭಟನೆ BDA JK_Adv BDA Adv

ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ಪ್ರಾಧಿಕಾರದ ಅಧಿಕಾರಿಗೆ ಕನ್ನಡ ಬಾರದ ಹಿನ್ನೆಲೆಯಲ್ಲಿ ಕೆಂಡಾಮಂಡಲರಾದ ಪ್ರತಿಭಟನಾನಿರತ ರೈತರು ಕೂಲಿ ಮಾಡೋಕೆ ನಾವು ಬೇಕು ಅಧಿಕಾರಿಗಳು ಮಾತ್ರ ಬೇರೆ ಭಾಷೆಯವರು ಬೇಕಾ? ಕನ್ನಡ ಬರುವ ಅಧಿಕಾರಿಯನ್ನು ಕರೆಸಿ ಎಂದು ಪಟ್ಟು ಹಿಡಿದರು.ಮೈ ಹೆದ್ದಾರಿಯ ಟೋಲ್ ಬಳಿ ರೈತರಿಂದ ಬೃಹತ್ ಪ್ರತಿಭಟನೆ jk02_new jk02 new.

Key words:  protest, farmers, toll, Bengaluru-Mysore, highway