Wednesday, September 23, 2026

BDA Apartments

Home Front Page ಬೈರಮಂಗಲದಲ್ಲಿ ಮಾರಾಮಾರಿಯಾದ್ರೆ ಯಾರು ಹೊಣೆ? HDK ವಿರುದ್ದ ‘ಕೈ’ ಶಾಸಕ ಸಿಡಿಮಿಡಿ

ಬೈರಮಂಗಲದಲ್ಲಿ ಮಾರಾಮಾರಿಯಾದ್ರೆ ಯಾರು ಹೊಣೆ? HDK ವಿರುದ್ದ ‘ಕೈ’ ಶಾಸಕ ಸಿಡಿಮಿಡಿ

ಬೆಂಗಳೂರು,ಜೂನ್,23,2026 (www.justkannada.in):  ಬಿಡದಿ ಟೌನ್ ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದ ಬದಲು ಬೈರಮಂಗಲದಲ್ಲಿ ರೈತರ ಸಮ್ಮುಖದಲ್ಲಿ ಚರ್ಚೆಗೆ ಬರುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಪತ್ರ ಬರೆದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಹೆಚ್ ಸಿ ಬಾಲಕೃಷ್ಣ, ಕುಮಾರಸ್ವಾಮಿಗೆ ಸಾಮಾನ್ಯ ಜ್ಞಾನವಿಲ್ಲ. ಬಾಲಿಶ ವರ್ತನೆ.  ಬೈರಮಂಗಲದಲ್ಲಿ ಮಾರಾಮಾರಿ ಆದರೆ ಯಾರು ಹೊಣೆ? ನಾಳೆ ಕಾನೂನು ಸುವ್ಯವಸ್ಥೆ ಹಾಳಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.ಬೈರಮಂಗಲದಲ್ಲಿ ಮಾರಾಮಾರಿಯಾದ್ರೆ ಯಾರು ಹೊಣೆ? HDK ವಿರುದ್ದ ‘ಕೈ’ ಶಾಸಕ ಸಿಡಿಮಿ...

ಹೆಚ್ ಡಿಕೆ ಬೇರೆ ರೈತರ ಪರವಾಗಿ ಏಕೆ ಹೋರಾಟ ಮಾಡಲಿಲ್ಲ. ಬಿಡದಿಯಲ್ಲಿ ಮಾತ್ರ ನಿಮ್ಮ ಹೋರಾಟ ಯಾಕೆ?  ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ,  ಹಾಸನದಲ್ಲೂ ರೈತರು ಹೋರಾಟ ಮಾಡಿದ್ದಾರೆ. ಐಐಟಿಗೆ ಭೂಸ್ವಾಧೀನ ಮಾಡಿದ್ದಾರೆ ಮೊದಲು ಆ ಭೂಮಿ ಬಿಡಿ ಎಂದು ಹೆಚ್ ಸಿ ಬಾಲಕೃಷ್ಣ ಸಿಡಿಮಿಡಿಗೊಂಡರು.ಬೈರಮಂಗಲದಲ್ಲಿ ಮಾರಾಮಾರಿಯಾದ್ರೆ ಯಾರು ಹೊಣೆ? HDK ವಿರುದ್ದ ‘ಕೈ’ ಶಾಸಕ ಸಿಡಿಮಿ...

ನಿಖಿಲ್ ಕುಮಾರಸ್ವಾಮಿ 5 ಎಕರೆ ಜಾಗ ಬಿಟ್ಟುಕೊಟ್ಟರೆ  ರೈತರಿಗೆ ಸೈಟ್ ಕೊಡೋಣ

ನಿಖಿಲ್ ಕುಮಾರಸ್ವಾಮಿ 5 ಎಕರೆ ಜಾಗ ಬಿಟ್ಟುಕೊಟ್ಟರೆ  ರೈತ ಹೋರಾಟಗಾರರಿಗೆ ಅಲ್ಲಿಯೇ ಸೈಟ್ ಕೊಡೋಣ .ಬೇಕಾದರೇನಿಖಿಲ್ ಲೇಔಟ್ ಅಂತಾ ಹೆಸರಿಡೋಣ. ಇಡೀ ಏರಿಯಾಗೆ ನಿಖಿಲ್ ಲೇಔಟ್ ಅಂತ ಹೆಸರಿಡುತ್ತೇವೆ ಎಂದು ಹೆಚ್ ಸಿ ಬಾಲಕೃಷ್ಣ ಟಾಂಗ್ ಕೊಟ್ಟರು.justkannada jk02_new jk02 new

Key words:  Bidadi town ship, MLA, Balakrinshna, HDK