ನಮ್ಮಲ್ಲಿ 16 ಟಿಎಂಸಿ ಮಾತ್ರ ನೀರಿದೆ: ತಮಿಳುನಾಡಿಗೆ ನಿಗದಿಯಷ್ಟು ಕೊಡೋಣ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಜೂನ್,20,2026 (www.justkannada.in):  ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲವಾದರಿಂದ ನೀರಿನ ಅಭಾವ ಸೃಷ್ಠಿಯಾಗುವ ಸಾಧ್ಯತೆ ಇದೆ. ಈ ಮಧ್ಯೆ ತಮಿಳುನಾಡಿಗೂ ನೀರು ಬಿಡಬೇಕಾದ ಪರಿಸ್ಥಿತಿ ಬಂದಿದ್ದು ಈ ಕುರಿತು ಜಲಸಂಪನ್ಮೂಲ ಇಲಾಖೆ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ನಮ್ಮಲ್ಲಿ 16 ಟಿಎಂಸಿ  ಮಾತ್ರ ನೀರಿದೆ. ತಮಿಳುನಾಡಿಗೆ ನಿಗದಿಯಾದಷ್ಟು ನೀರು ಕೊಡೋಣ.  ನಮಗೆ ಎಷ್ಟು ನೀರು ಬೇಕೋ ಆಷ್ಟು  ಇಟ್ಟುಕೊಳ್ಳೋಣ  ಸದ್ಯ ಹೆಚ್ಚಾಗಿ ಮಳೆಯಾಗದ ಕಾರಣ ನೀರಿನ ಪ್ರಮಾಣ ಕಡಿಮೆಯಿದೆ ಎಂದರು.

ಮೇಕೆದಾಟು ನಮ್ಮ ಮಹತ್ವಾಕಾಂಕ್ಷಿ ಯೋಜನೆ . ಡ್ಯಾಂ ಕಟ್ಟಿದರೆ 67 ಟಿಎಂಸಿ ನೀರು ಸಂಗ್ರಹವಾಗುತ್ತೆ. 400 ಮೆಗಾವ್ಯಾಟ್ ವಿದ್ಯುತ್ ಪೂರೈಸಬಹುದು ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: only, 16 TMC, water, Tamil Nadu, Minister, Ramalinga Reddy