Friday, August 7, 2026

BDA Apartments

Home Front Page ಅಡ್ಡ ಮತದಾನ ಮಾಡಿರುವವರ ವಿರುದ್ದ ಕ್ರಮ ನಿಶ್ಚಿತ- ಆರ್.ಅಶೋಕ್

ಅಡ್ಡ ಮತದಾನ ಮಾಡಿರುವವರ ವಿರುದ್ದ ಕ್ರಮ ನಿಶ್ಚಿತ- ಆರ್.ಅಶೋಕ್

ಬೆಂಗಳೂರು,ಜೂನ್,19,2026 (www.justkannada.in):  ನಿನ್ನೆ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರ ವಿರುದ್ದ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ಅಡ್ಡಮತದಾನ ಆಗಿರೋದು ನಿಜ ಇದರಲ್ಲಿ ಮುಚ್ಚುಮರೆ ಇಲ್ಲ. ಯಾರು ಅಡ್ಡ ಮತದಾನ ಮಾಡಿದ್ದಾರೆ ಅಂತಾ ನೋಡುತ್ತಿದ್ದೇವೆ. ಪಕ್ಷದ ಹಂತದಲ್ಲಿ ಚರ್ಚೆ ಆಗಿದೆ. ಅಡ್ಡಮತದಾನ ಮಾಡಿದವರ ವಿರುದ್ದ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಚುನಾವಣೆಯಲ್ಲಿ ಅಡ್ಡ ಮತದಾನದ ಬಗ್ಗೆ ವರಿಷ್ಠರಿಗೆ ಮಾಹಿತಿ ಹೋಗಿದೆ ಯಾರು ಅಂತಾ ಖಚಿತ ಆದ ಮೇಲೆ ವರಿಷ್ಠರ ಜೊತೆ ಚರ್ಚೆ ಮಾಡುತ್ತೇವೆ ಎಂದರು.

ಬಿಜೆಪಿಯಲ್ಲಿ ಅಡ್ಡಮತದಾನ ನಮಗೆ ಆಶ್ಚರ್ಯ ಆಗಿದೆ. ನಾವು ಯಾವುದೇ ರೆಸಾರ್ಟ್ ಗೆ ಕರೆದುಕೊಂಢು ಹೋಗಿರಲಿಲ್ಲ ಚುನಾವಣೆಯಲ್ಲಿ ಅಡ್ಡಮತದಾನದ ಯಾವುದೇ ಸೂಚನೆ ಇರಲಿಲ್ಲ. ಜೆಡಿಎಸ್ ಅಭ್ಯರ್ಥಿಯನ್ನು ಹಾಕದಿದ್ದರೇ ಈ ರೀತಿ ಆಗುತ್ತಿರಲಿಲ್ಲ. ಜೆಡಿಎಸ್ ನವರು ಪರೀಕ್ಷೆ ಮಾಡಿಕೊಳ್ಳಲು ಹೀಗೆ ಸ್ಟ್ರಾಟಜಿ ಮಾಡಿ ಅವರನ್ನು ಪರೀಕ್ಷೆ ಮಾಡಿದ್ದಾರೆ ಅನ್ನಿಸುತ್ತಿದೆ. ಇದರಿಂದ ಇವತ್ತು ಈ ಸಮಸ್ಯೆ ಉದ್ಬವವಾಗಿದೆ.  ನಾವು ಅಡ್ಡ ಮತದಾನ ಸಮರ್ಥನೆ ಮಾಡುವುದಕ್ಕೆ ಆಗಲ್ಲ ಎಂದರು.

Key words: Action, against, cross voted, R. Ashok