4 ಜನರಿಂದ ಕ್ರಾಸ್ ವೋಟ್: ಯಾರು ಅಂತಾನೂ ಗೊತ್ತು: ಜಿಟಿಡಿ ವಿರುದ್ದ ಕಿಡಿಕಾರಿದ ಕೇಂದ್ರ ಸಚಿವ HDK

ಮೈಸೂರು,ಜೂನ್,19,2026 (www.justkannada.in): ನಿನ್ನೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ನಾಲ್ಕು ಜನರು ಕ್ರಾಸ್ ವೋಟ್ ಮಾಡಿದ್ದಾರೆ. ಜಿಟಿ ದೇವೇಗೌಡರ ಹೆಸರು ನನ್ನ ಬಳಿ ಹೇಳಲೇ ಬೇಡಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,  ರಾಜ್ಯದಲ್ಲಿ ದೇಶದಲ್ಲಿ ದೇವೇಗೌಡರು ಒಂದು ಗೌರವ ಉಳಿಸಿಕೊಂಡು ಬಂದಿದ್ದಾರೆ. 60 ವರ್ಷ ರಾಜಕೀಯದಲ್ಲಿ ಅಧಿಕಾರದಲ್ಲಿ ಇದ್ದಿದ್ದು ಕಡಿಮೆ. ಅವರ ರಾಜಕೀಯ ಬಳುವಳಿ ನನಗೂ ಕೊಟ್ಟಿದ್ದಾರೆ. ನಾವು ಅಧಿಕಾರಕ್ಕಿಂತ ವಿರೋಧ ಪಕ್ಷದಲ್ಲಿ ಇದ್ದಿದ್ದು ಹೆಚ್ಚು. 2007ರ ನಂತರ ಜೆಡಿಎಸ್ ನಡೆಸುವ ಜವಾಬ್ದಾರಿ ನನ್ನ ಹೆಗಲಿಗೆ ಬಿತ್ತು. ಪಕ್ಷಕ್ಕೆ ಆರ್ಥಿಕವಾಗಿ ಶಕ್ತಿ ಇಲ್ಲದಿದ್ದರೂ. ಇನ್ನು ರಾಜ್ಯದಲ್ಲಿ ಅಸ್ತಿತ್ವ ಇಟ್ಟುಕೊಂಡಿದೆ. ಇದು ಕಾರ್ಯಕರ್ತರ ಶಕ್ತಿ. ನಿಜವಾದ ಅಗ್ನಿ ಪರೀಕ್ಷೆ ಇರೋದು 2028ಕ್ಕೆ . ಹಣ ಬಲ ತೋಳ್ಬಲ ವಿರುದ್ಧ ಹೋರಾಟ ಮಾಡಬೇಕಿದೆ. ಪಕ್ಷ ಉಳಿಸೋಕೆ ನಿಜವಾದ ಕಾರ್ಯಕರ್ತರು ಇದ್ದಾರೆ ಎಂದರು.

ಕ್ರಾಸ್ ವೋಟ್ ಮಾಡಿರೋರ ಸಂಪೂರ್ಣ ಮಾಹಿತಿ ಇದೆ.

ನಿನ್ನೆ ಚುನಾವಣೆಯಲ್ಲಿ ಕ್ರಾಸ್ ವೋಟ್ ಮಾಡಿರೋರ ಸಂಪೂರ್ಣ ಮಾಹಿತಿಯಿದೆ. ಈ ಫಲಿತಾಂಶ ನನಗೆ ಮೊದಲೇ ಗೊತ್ತು. ಅದರಿಂದ ನಾನು ವಿಚಲಿತನಾಗಿಲ್ಲ. ಕ್ಷೇತ್ರದಲ್ಲಿ ಅಭಿವೃದಿ ಆಗುತ್ತಿಲ್ಲ ಅಂತ. ಮುಂದೆ ಏನು ಮಾಡಬೇಕು ಅಂತ ಕೆಲವರು ತೀರ್ಮಾನ ಮಾಡಿಕೊಂಡಿದ್ದಾರೆ. 4 ಜನ ಕ್ರಾಸ್ ವೋಟ್ ಹಾಕಿದ್ದಾರೆ. ಯಾರು ಯಾರು ಅಂತಾನೂ ಗೊತ್ತು. ಪಾರ್ಟಿ ಬಿಡುವ ಬಗ್ಗೆಯೂ ಅವರೆಲ್ಲ ಚರ್ಚೆ ಮಾಡಿದ್ದಾರೆ. ಅದು ಕೂಡ ನನಗೆ ಗೊತ್ತು. ಹೋಗೋರು ಹೋಗಲಿ ಹೊಸದಾಗಿ ಜೆಂಜಿ ಅಂತಾರಲ್ಲ ಅಂತ ಯುವಕರು ಪಾರ್ಟಿಗೆ ಬರ್ತಾರೆ ಎಂದರು.

ಜಿಟಿ ದೇವೇಗೌಡರ ಹೆಸರು ನನ್ನ ಬಳಿ ಹೇಳಲೇ ಬೇಡಿ. ಅವರ ಬಗ್ಗೆ ನಾನು ಮಾತನಾಡಲ್ಲ.ರೇವಣ್ಣ ಜೊತೆ ಚರ್ಚೆ ಮಾಡಿದ್ದಾರೆ. ಆದರೆ ಪಕ್ಷದಲ್ಲಿ ಅಂತಿಮ ತೀರ್ಮಾನ ಮಾಡೋದು ನಾನೇ. ಕಾರ್ಯಕರ್ತರ ಅಭಿಪ್ರಾಯವೇ ನನಗೆ ಮುಖ್ಯ. 3 ಬಾರಿ ನನಗೆ ಅನುಭವವಾಗಿದೆ/2006 2013 2018 ಎಲ್ಲಾ ಕಡೆ ಏನು ಮಾಡಿದ್ದಾರೆ ನೋಡಿದ್ದೇನೆ. ಯಾರು ಎಷ್ಟೇ ಒತ್ತಡ ಹಾಕಿದರೂ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು  ಜಿಟಿ ದೇವೇಗೌಡರ ವಿರುದ್ಧ ಪರೋಕ್ಷ ಕಿಡಿಕಾರಿದರು.

ಇವರ ರೀತಿ ಪಾಪದ ಹಣ ಮಾಡಿಲ್ಲ. ನಮ್ಮ ಸಹಿ ಯನ್ನು ನಾನು ಮಾರಾಟಕ್ಕೆ ಇಟ್ಟಿಲ್ಲ

ನಾನು ಒಂದು ಬಾರಿ ದೊಡ್ಡ ಗೌಡರ ವಿರುದ್ಧ ನಿರ್ಧಾರ ತೆಗೆದುಕೊಂಡೆ. ಅದರಿಂದ ಜನರಿಗೆ ಕುಮಾರಸ್ವಾಮಿ ಯಾರು ಅಂತ ಗೊತ್ತಾಯಿತು. ಇವತ್ತು ರಾಜ್ಯ ಹಾಗೂ ಪಕ್ಷ ಎರಡನ್ನು ಉಳಿಸಬೇಕು. ವೈಯಕ್ತಿಕ ಪ್ರಶ್ನೆ ಇಲ್ಲ ರಾಜ್ಯ ಪಕ್ಷ ಉಳಿಸಲು ಕಠಿಣ ಕ್ರಮ ತೆಗೆದುಕೊಳ್ಳುವ ಅನಿವಾರ್ಯ ಇದೆ. ಇಂದಿನಿಂದ ನನ್ನ ಹೋರಾಟ ಪ್ರಾರಂಭ ಆಗುತ್ತೆ. ಚುನಾವಣೆ ಸಂದರ್ಭದಲ್ಲಿ ಮನೆ ದುಡ್ಡು ತಂದು ರಾಜಕಾರಣ ಮಾಡೋಕಾಗತ್ತಾ? ಆಲೂಗಡ್ಡೆ ಬೆಳೆದು ಹಣ ತಂದ್ರಾ ಅಂತ ಕೇಳುತ್ತಾರೆ. ನನ್ನ ಹೆಂಡತಿ ಮಗನ ಫೋಟೋ ಹಾಕಿ ಬಿಡದಿಯಲ್ಲಿ ಪೋಸ್ಟರ್ ಹಾಕಿದ್ದಾರೆ. ಈ ಹಿಂದೆ ಪ್ಲೇ ವಿನ್ ಲಾಟರಿ ಬ್ಯಾನ್ ಮಾಡಿದ್ದೆ. ಅವಾಗ ಕೋಟಿ ಗಟ್ಟಲೆ ಹಣ ಕೊಡಲು ಬಂದವರು ಯಾರು?  ಹಣ ಮಾಡುವ ವ್ಯಾಮೋಹ ಇದ್ದಿದ್ದರೇ ಅವತ್ತು ಕೋಟ್ಯಂತರ ಹಣ ಪಡೆದು ಲಾಟರಿ ಆಡಲಿ ಅಂತ ಬಿಡುತ್ತಿದ್ದೆ. ನಾನು ಪಕ್ಷಕ್ಕಾಗಿ ದೇಣಿಗೆ ತೆಗೆದುಕೊಂಡಿದ್ದಾನೆ. ಅದನ್ನು ಬಿಟ್ಟು ಇವರ ರೀತಿ ಪಾಪದ ಹಣ ಮಾಡಿಲ್ಲ. ನಮ್ಮ ಸಹಿ ಯನ್ನು ನಾನು ಮಾರಾಟಕ್ಕೆ ಇಟ್ಟಿಲ್ಲ ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದರು.

ಬಿಡದಿ ಟೌನ್ ಶಿಫ್ ಕುಮಾರಸ್ವಾಮಿ ಕೂಸು ಅಂತಾರೆ. ನೈಸ್ ರಸ್ತೆ ದೇವೇಗೌಡರ ಕೂಸು ಅನ್ನುತ್ತಿದ್ದರು. ಬಿಡದಿಯಲ್ಲಿ ರೆಡ್ ಜೋನ್ ಲಿಫ್ಟ್ ಮಾಡಿಲ್ಲ ಅಂತಾರೆ. ನಾನು ರೆಡ್ ಜೋನ್ ತೆಗೆದಿಲ್ಲ ಅಂತಾನೇ ಇನ್ನೂ ಭೂಮಿ ಉಳಿದಿದೆ. ಇಲ್ಲದಿದ್ದರೆ ಯಾವತ್ತೂ ಭೂಮಿ ರೈತರಿಂದ ಹೋಗಿತ್ತು. ನನ್ನ ಕಾಲದಲ್ಲಿ ಡಿ.ಎಲ್. ಎಫ್ ಹಣ ಕಟ್ಟಿಲ್ಲ. ರಾಜ್ಯಪಾಲದ ಅವಧಿಯಲ್ಲಿ ಹಣ ಕಟ್ಟಿ ನಂತರ ವಾಪಸ್ ತೆಗೆದುಕೊಂಡು ಹೋಗಿದ್ದಾರೆ ಎಂಧರು.

ಬಿಡದಿ ಟೌನ್ ಶಿಪ್  ಬಗ್ಗೆ ಸಿದ್ದರಾಮಯ್ಯರ ಭಾಷಣ ಬಿಡುಗಡೆ ಮಾಡ್ತೀನಿ

2007 ಜುಲೈ 31 ರಂದು ಬಿಡದಿ ಟೌನ್ ಶಿಪ್ ಬಗ್ಗೆ ಸಿದ್ದರಾಮಯ್ಯ ಏನು ಭಾಷಣ ಮಾಡಿದ್ದಾರೆ ಬಿಡುಗಡೆ ಮಾಡುತ್ತೇನೆ. ಸಿದ್ದರಾಮಯ್ಯ ಪುಟಗಟ್ಟಲೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿದ್ದಾರೆ. 5 ಟೌನ್ ಶಿಪ್ ಮಾಡಲು ನಿರ್ಧಾರ ಮಾಡಿದ್ದು ನಿಜ. ಎಲ್ಲರನ್ನೂ ಕರೆದು 3 ರಿಂದ 4 ಸಭೆ ಮಾಡಿ ಜನರ ಭಾವನೆಗೆ ಬೆಲೆ ಕೊಟ್ಟು ನಾನು ಅಂದು ಬಿಡದಿ ಟೌನ್ ಶಿಫ್ ಕೈಬಿಟ್ಟೆ. ರೈತರ ಹಾಗೂ ನನ್ನ ಜನರ ಭೂಮಿ ರಿಯಲ್ ಎಸ್ಟೇಟ್ ಗೆ ಕೊಡಲ್ಲ ಅಂತ ಬಿಟ್ಟೆ. ರೈತರ ಧ್ವನಿಯಾಗಿ ನನ್ನ ಹೋರಾಟ . ಕಾನೂನು ವ್ಯಾಪ್ತಿಯಲ್ಲಿ ರೈತರ ಪರ ನಾನು ನ್ಯಾಯ ಕೊಡಿಸುವ ಹೋರಾಟ ಮಾಡುತ್ತೇನೆ ಎಂದು ಹೆಚ್ ಡಿಕೆ ತಿಳಿಸಿದರು.

ಜಿಟಿಡಿ ಜೆಡಿಎಸ್ ಪಕ್ಷದಿಂದ ಔಟ್

ಕ್ರಾಸ್ ಓಟಿಂಗ್ ಎಫೆಕ್ಟ್ ಜಿಟಿಡಿ ಜೆಡಿಎಸ್ ಪಕ್ಷದಿಂದ ಔಟ್, ನಾನು ಈಗಾಗಲೇ ಎಲ್ಲಾ ರೀತಿಯ ತೀರ್ಮಾನ ತೆಗೆದುಕೊಂಡಿರುವೆ. ತಂದೆಯವರು ಹೇಳಿದರೂ ನಾನು ಕೇಳುವುದಿಲ್ಲ. ಯಾರು, ಏನೇ ಹೇಳಿದರೂ ಅಂತಿಮ ತೀರ್ಮಾನ ನನ್ನದೆ. ಅವರು ನಮ್ಮ ಪಕ್ಷದಲ್ಲಿ ಇರುವುದಿಲ್ಲ ಎಂದು ಹೆಚ್ ಡಿಕೆ ತಿಳಿಸಿದರು.

Key words: Cross vote, MLC Election, Union Minister, HDK