ತಮಿಳುನಾಡು ಸಿಎಂ ವಿಜಯ್ ವಿರುದ್ದ ಪ್ರತಿಭಟನೆಗೆ ನಿರ್ಧರಿಸಿದ್ದ ಕರವೇ ಕಾರ್ಯಕರ್ತರು ವಶಕ್ಕೆ

ಮಂಗಳೂರು,ಜೂನ್,12,2026 (www.justkannada.in):  ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಸಿಎಂ ವಿಜಯ್ ವಿರುದ್ದ ಪ್ರತಿಭಟನೆಗೆ ನಿರ್ಧರಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು.

ಇಂದು ಕೊಲ್ಲೂರು ಮುಕಾಂಬಿಕಾ ದೇವಸ್ತಾನಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ ನೀಡುತ್ತಿದ್ದು ಇವರ ವಿರುದ್ದ ಪ್ರತಿಭಟನೆ ನಡೆಸಲು ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ಮುಂದಾಗಿದ್ದರು. ಮೇಕೆದಾಟು ವಿಚಾರ ಇಟ್ಟುಕೊಂಡು ಉಡುಪಿಯ ಉದ್ಯಾವರ ಬಲೈಪಾದೆ ಬಳಿ ಪ್ರತಿಭಟನೆಗೆ ನಿರ್ಧರಿಸಿದ್ದರು.

ಆದರೆ ಸಿಎಂ ವಿಜಯ್ ಆಗಮಿಸುವ ಮುನ್ನವೇ 25ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನ  ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಮಂಗಳೂರಿಗೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್ ಕೊಲ್ಲೂರಿನತ್ತ ಹೊರಟಿದ್ದಾರೆ.

Key words: Karave activists, protest, against, Tamil Nadu, CM, Vijay