ಮೈಸೂರು,ಮೇ,20,2026 (www.justkannada.in): ಹಣ ಕೇಳಿದಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ತಮ್ಮ ವಿರುದ್ದ ಕೋಟೆಹುಂಡಿ ಮಹದೇವು ಎಂಬುವವರು ದೂರು ದಾಖಲಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್.ವಿಶ್ವನಾಥ್, ಪ್ರಕರಣದ ಹಿಂದೆ ಸಿದ್ದರಾಮಯ್ಯ ಮಗನ ಕುಮ್ಮಕ್ಕಿದೆ. ಕೋಟೆಹುಂಡಿ ಮಹದೇವುಗೆ 55 ಲಕ್ಷ ರೂ. ಎಲ್ಲಿ ಬಂತು. ನಾನು ಯಾವತ್ತು ದುಡ್ಡಿನ ವ್ಯವಹಾರ ಮಾಡಿದವನು ಅಲ್ಲ. ನನ್ನ ತೇಜೋವಧೆ ಮಾಡಲು ಸಿಎಂ ಚೇಲಗಳು ಹುನ್ನಾರ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು
ತಮ್ಮ ವಿರುದ್ದ ಎಫ್ ಐಆರ್ ವಿಚಾರ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್. ಈಗಾಗಲೇ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಉತ್ತರ ಕೊಟ್ಟಿದ್ದೇನೆ. ರೈಲ್ವೆ ನಿಲ್ದಾಣಕ್ಕೆ ಬಂದು ನನ್ನ ಹೇಳಿಕೆ ಪಡೆದಿದ್ದಾರೆ ನಮ್ಮನ್ನ ಈ ರೀತಿ ತೇಜೊವಧೆ ಮಾಡಬಾರದು ಎಂದರು.
Key words: FIR, Siddaramaiah, son, case, H. Vishwanath







