Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಫುಟ್ ಪಾತ್ ಒತ್ತುವರಿ ತೆರವು: ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ- ಕೇಂದ್ರ ಸಚಿವ HDK

ಫುಟ್ ಪಾತ್ ಒತ್ತುವರಿ ತೆರವು: ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ- ಕೇಂದ್ರ ಸಚಿವ HDK

ಬೆಂಗಳೂರು,ಜುಲೈ,4,2026 (www.justkannada.in):  ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಅಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ಲಕ್ಷಾಂತರ ಕುಟುಂಬ ಬೀದಿಬದಿ ವ್ಯಾಪಾರ ಮಾಡಿ ಬದುಕುತ್ತಿವೆ.  ಸುಪ್ರೀಂ ಆದೇಶದ ಮೇರೆಗೆ ಒತ್ತುವರಿ ತೆರವುಗೊಳಿಸಿ. ಆದರೆ ಅವರ ಬದುಕು ಏನು ಮಾಡುತ್ತೀರಾ?  ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯವಾಗಿ ಏನು ಮಾಡಿದ್ದೀರಿ. ಏಕಾ ಏಕಿ ಖಾಲಿ ಮಾಡಿಸಿದರೇ ಅವರು ಎಲ್ಲಿಗೆ ಹೋಗಬೇಕು.  ಪರ್ಯಾಯ ವ್ಯವಸ್ಥೆ ಮಾಡಬೇಕು ಅನ್ನೋದು ನನ್ನ ಒತ್ತಾಯ.  ರಸ್ತೆಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಹೇಳಿದರು.ಫುಟ್ ಪಾತ್ ಒತ್ತುವರಿ ತೆರವು: ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮ...

ಡಿಕೆ ಶಿವಕುಮಾರ್ ಸಿಎಂ ಆಗಿ ಒಂದು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ,  ಸಿಎಂ ಸಾಧನೆ ಏನು ಮಾಡಿದ್ದಾರೆ. ಬರೀ ಘೋಷಣೆ ಅಷ್ಟೆ.  ಡಿಕೆ ಶಿವಕುಮಾರ್ ರವರ ಯಾವ ಘೋಷಣೆ ಅನುಷ್ಟಾನ ಆಗಿದೆ . ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಎಲ್ಲಿಗೆ ಬಂದಿದೆ ಹೇಳಿದ್ರಾ? ಕಳೆದ ಒಂದು ತಿಂಗಳಲ್ಲಿ ಯಾವುದೇ ಯೋಜನೆ ಜಾರಿಯಾಗಿಲ್ಲ. ಸರ್ಕಾರ ಪಿಕ್ ಪಾಕೆಟ್ ಮಾಡೋದು ಹೇಗೆ ಅಂತಾ ಯೋಚನೆ ಮಾಡುತ್ತಿದ್ದಾರೆ . ದುಡ್ಡು ಹೊಡೆಯುವ ಕಾರ್ಯಕ್ರಮ ಇದ್ದರೇ ಶಂಕು ಸ್ಥಾಪನೆ ಅಷ್ಟೆ ಎಂದು ವ್ಯಂಗ್ಯವಾಡಿದರು.ಫುಟ್ ಪಾತ್ ಒತ್ತುವರಿ ತೆರವು jk02_new jk02 new

Key words: Clearing, footpath, encroachment, street vendors, Union Minister, HDK