ಬೆಂಗಳೂರು,ಮೇ,20,2026 (www.justkannada.in): ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕೊಟ್ಟ ಪಂಥಾಹ್ವಾನಕ್ಕೆ ನಾನು ರೆಡಿ ಇದ್ದೇನೆ. ನನಗೆ 3 ದಿನ ಸಾಕು, ಜಾಗ ಮತ್ತು ಸ್ಥಳ ನೀವೇ ಫಿಕ್ಸ್ ಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಹೆಚ್ ಡಿಕೆ ಆಹ್ವಾನ ಸ್ವೀಕಾರ ಮಾಡಿದ್ದೇನೆ. ಬೆಲೆ ಏರಿಕೆಯಿಂದ ಸಾಯ್ತಿದ್ದಾರೆ ಅದಕ್ಕೆ ಮೊದಲು ಪರಿಹಾರ ಕೊಡಿ. ನೀವು ಕೈಗಾರಿಕಾ ಸಚಿವರಾಗಿದ್ದೀರಿ. ಬಡವರಿಗೆ ಅನುಕೂಲ ಮಾಡಿಕೊಡಿ ಅಧಿಕಾರ ಇದೆ. ಬಡವರಿಗೆ ಅನುಕೂಲ ಮಾಡಿಕೊಡಿ ಎಂದು ಟಾಂಗ್ ಕೊಟ್ಟರು.
ಬಿಡದಿ ಟೌನ್ ಶಿಪ್ ಸಂಬಂಧ ಈ ವಿಚಾರದಲ್ಲಿ ಕೋರ್ಟ್ ಗೆ ಹೋಗಲಿ ಏನಾದರೂ ಮಾಡಿಕೊಳ್ಳಲಿ ಮೂರು ಮೂರು ಹಳ್ಳಿಗಳನ್ನ ಸೇರಿಸಿ ಡಿನೋಟಿಫೈ ಮಾಡುತ್ತೇವೆ. ಒಂದೊಂದೆ ಕ್ಲಿಯರ್ ಮಾಡುತ್ತೇವೆ. ಬಿಡದಿಗೆ ಗ್ರೇಟರ್ ಬೆಂಗಳೂರು ಎಂದೇ ಹೆಸರಿಡುತ್ತೇನೆ. ಒಂದೇ ಜಾಗದಲ್ಲಿ ನಿಮಗೆ ಸೈಟ್ ಕೊಡುತ್ತೇನೆ. ನಿಮಗೆ ಕೊಡುವ ದುಡ್ಡು ನಿಮಗೆ ಕೊಡುವ ಸೌಲಭ್ಯ ಸೇರಿದರೇ ಸರ್ಕಾರಕ್ಕೆ ಒಂದು ಎಕರೆಗೆ 5 ಕೋಟಿ ರೂ ಬರುತ್ತೆ. ಈ ವಿಚಾರದಲ್ಲಿ ಹೆಚ್ ಡಿಕೆ ಪಂಥಾಹ್ವಾನ ನೀಡಿದ್ದಾರೆ. ಅದಕ್ಕೆ ನಾನು ಸಿದ್ದ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: I am, ready , challenge, HDK, DCM, DK Shivakumar







