Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ವಿಬಿ-ಜಿ ರಾಮ್ ಜಿ ಜಾರಿ, ಕೂಲಿ ದರ ಹೆಚ್ಚಳ: CEO ಎಸ್ .ಯುಕೇಶ್ ಕುಮಾರ್

ವಿಬಿ-ಜಿ ರಾಮ್ ಜಿ ಜಾರಿ, ಕೂಲಿ ದರ ಹೆಚ್ಚಳ: CEO ಎಸ್ .ಯುಕೇಶ್ ಕುಮಾರ್

ಮೈಸೂರು,ಜುಲೈ,4,2026 (www.justkannada.in):  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮ-ನರೇಗಾ) ಯೋಜನೆಗೆ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ ) ಯೋಜನೆಯು ಜುಲೈ 1 ರಿಂದಲೇ  ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬಂದಿದ್ದು, ಅದೇ ದಿನವೇ ಕೇಂದ್ರ ಸರ್ಕಾರ ಯೋಜನೆಯಡಿ ದೊರೆಯುವ ಪರಿಷ್ಕೃತ ಕೂಲಿ ದರ ಏರಿಕೆ ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ .ಯುಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಜುಲೈ 1 ರಿಂದಲೇ ಅನ್ವಯವಾಗುವಂತೆ ಪರಿಷ್ಕೃತ ಕೂಲಿ ದರ ಅನ್ವಯವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಕರ್ನಾಟಕ ರಾಜ್ಯದಲ್ಲಿ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇದ್ದಂತಹ ಕೂಲಿ ದರ ರೂ.370  ರೂ.ಗಳನ್ನು ವಿಬಿ-ಜಿ ರಾಮ್ ಜಿ ಅಡಿ 382 ರೂ.ಗೆ ಹೆಚ್ಚಿಸಿದ್ದು, ಇದು ಈಗಾಗಲೇ ಚಾಲ್ತಿಯಲ್ಲಿದೆ ಎಂದು ಮಾಹಿತಿ ನೀಡಿದರು.ವಿಬಿ-ಜಿ ರಾಮ್ ಜಿ ಜಾರಿ, ಕೂಲಿ ದರ ಹೆಚ್ಚಳ: CEO ಎಸ್ .ಯುಕೇಶ್ ಕುಮಾರ್ BDA JK_Adv BDA Adv

ಬಡವರು, ರೈತರು, ಮಹಿಳೆಯರು ಹಾಗೂ ಯುವಶಕ್ತಿಯನ್ನು ಆಧಾರಿಸಿ ವಿಬಿ-ಜಿ ರಾಮ್ ಜಿ ಯೋಜನೆಯ ರೂಪು ರೇಷೆಗಳನ್ನು ಮರು ರೂಪಿಸಲಾಗಿದೆ. 125 ದಿನಗಳಿಗೆ ಕೂಲಿ ಖಾತ್ರಿಯ ಉದ್ಯೋಗ ದಿನಗಳನ್ನು ಹೆಚ್ಚಿಸಲಾಗಿದೆ.  ಕೆಲಸ ಮಾಡಿದ 15 ದಿನಗಳಲ್ಲಿ ಕೂಲಿ ಪಾವತಿ ಮಾಡಲಾಗುತ್ತದೆ. ಜಲ ಭದ್ರತೆಗಾಗಿ ನೀರು ಸಂಬಂಧಿತ ಕಾಮಗಾರಿಗಳು, ಉತ್ಕೃಷ್ಟ ಗ್ರಾಮೀಣ ಮೂಲ ಸೌಕರ್ಯಗಳ ನಿರ್ಮಾಣ ಸುಸ್ಥಿರ  ಆದಾಯಕ್ಕಾಗಿ ಜೀವನೋಪಾಯ ಮೂಲಸೌಕರ್ಯ, ಹವಮಾನ ಸ್ಥಿತಿ ಸ್ಥಾಪಕತ್ವ ಮತ್ತು ವಿಪತ್ತು ಸನ್ನದ್ಧ ಕಾಮಗಾರಿಗಳಿಗೆ ಆಧ್ಯತೆ ನೀಡಲಾಗಿದೆ ಎಂದು ಯುಕೇಶ್ ಕುಮಾರ್ ತಿಳಿಸಿದರು.

ವಿಬಿ ಜಿ-ರಾಮ್ ಜಿ ಯೋಜನೆ ಕುರಿತು ತರಬೇತಿ

ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಲ್ಲಿ ತರಬೇತಿ ಪಡೆದ ಮಾಸ್ಟರ್ ಟ್ರೈನರ್ಸ್ ಗಳಿಂದ ಸರ್ಕಾರದ ಮಾರ್ಗಸೂಚಿಯಂತೆ ಜುಲೈ 1 ರಿಂದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಎಲ್ಲಾ ವರ್ಗದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರು, ಆಡಳಿತಾಧಿಕಾರಿಗಳು, ಪಿಡಿಒ ಹಾಗೂ ಎಲ್ಲಾ  ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.ವಿಬಿ YUKESH KUMAR YUKESH

ಮೈಸೂರು ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಬೀಮಪ್ಪ ಕ ಲಾಳಿ ಮಾತನಾಡಿ, ಪ್ರತಿ ದಿನಕ್ಕೆ ರೂ.370 ಇದ್ದ ಕೂಲಿ ದರವನ್ನು ರೂ.12 ಹೆಚ್ಚಿಸಲಾಗಿದ್ದು,  ಜುಲೈ 1 ರಿಂದಲೇ ರೂ.382 ಕೂಲಿ ದರ ನಿಗದಿಪಡಿಸಲಾಗಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಬದಲಾಗಿ ಈಗ 125 ದಿನಗಳವರೆಗೆ ಉದ್ಯೋಗ ನೀಡಲಾಗುವುದು. ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದೆ ಎಂದರು.ಜಿ ರಾಮ್ ಜಿ ಜಾರಿ jk02_new jk02 new

Key words: VB-G Ram Ji, implemented, Mysore ZP, CEO