Sunday, September 20, 2026

BDA Apartments

ಡಾಲರ್ ಎದುರು ಐತಿಹಾಸಿಕ ಕುಸಿತ ಕಂಡ ರೂಪಾಯಿ ಮೌಲ್ಯ BDA JK_Adv BDA Adv
Home Front Page ಡಾಲರ್ ಎದುರು ಐತಿಹಾಸಿಕ ಕುಸಿತ ಕಂಡ ರೂಪಾಯಿ ಮೌಲ್ಯ

ಡಾಲರ್ ಎದುರು ಐತಿಹಾಸಿಕ ಕುಸಿತ ಕಂಡ ರೂಪಾಯಿ ಮೌಲ್ಯ

ನವದೆಹಲಿ,ಮಾರ್ಚ್,20,2026 (www.justkannada.in): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ ಕಂಡಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ದ, ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ, ಅಮೆರಿಕದ ಒಂದು ಡಾಲರ್‌ ಗೆ ರೂಪಾಯಿ ಮೌಲ್ಯ 93ರ ಗಡಿ ದಾಟಿದೆ.  ಒಂದು ಡಾಲರ್‌ ಗೆ 93.24 ರೂಪಾಯಿ ತಲುಪಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಯುದ್ಧ ತೀವ್ರಗೊಂಡಿರುವುದು ಹಾಗೂ ಜಾಗತಿಕವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಯುದ್ಧ ಶುರುವಾದ ನಂತರ, ಕಳೆದ ಕೆಲವೇ ದಿನಗಳಲ್ಲಿ ರೂಪಾಯಿ ಮೌಲ್ಯ ಸುಮಾರು 2% ರಷ್ಟು ಕುಸಿತ ಕಂಡಿದೆ.

Key words: Rupee, historic, low, against, dollar