Tuesday, August 4, 2026

BDA Apartments

Home Front Page ಕಾಂಗ್ರೆಸ್ ಪಕ್ಷಕ್ಕೆ ಒತ್ತಡ ಹೇರಲು ಬ್ಲಾಕ್ ಮೇಲ್ ಮಾಡಲು ಆಗಲ್ಲ- ಸಚಿವ ಎಂ.ಬಿ ಪಾಟೀಲ್

ಕಾಂಗ್ರೆಸ್ ಪಕ್ಷಕ್ಕೆ ಒತ್ತಡ ಹೇರಲು ಬ್ಲಾಕ್ ಮೇಲ್ ಮಾಡಲು ಆಗಲ್ಲ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಮಾರ್ಚ್,20,2026 (www.justkannada.in): ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಟಿಕೆಟ್ ವಿಚಾರ ಸಂಬಂಧ,  ಕಾಂಗ್ರೆಸ್ ಪಕ್ಷಕ್ಕೆ ಒತ್ತಡ ಹೇರಲು ಬ್ಲಾಕ್ ಮೇಲ್ ಮಾಡಲು ಆಗಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಇಂದು ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ಶಾಮನೂರು ಕುಟುಂಬ  ಟಿಕೆಟ್ ಕೊಡಬೇಕು ಅಂತಾ ಕೇಳಿದ್ದಾರೆ. ಹೆಚ್ ವೈ ಮೇಟಿ ಕುಟುಂಬದವರಿಗೆ ನಾವು ಟಿಕೆಟ್ ಕೊಡತ್ತಿದ್ದೇವೆ ಇಲ್ವಾ ಹಾಗೆ ಶಾಮನೂರು ಕುಟುಂಬದವರು ಟಿಕೆಟ್ ಕೇಳುತ್ತಿದ್ದಾರೆ.  ಅಲ್ಪಸಂಖ್ಯಾತ ಸಮುದಾಯದವರು ಕೂಡ ಟಿಕೆಟ್ ಬೇಡಿಕೆ ಇಟ್ಟಿದ್ದರೆ ಅದರಲ್ಲೇನು ತಪ್ಪಿಲ್ಲ. ಯಾರು ಬೇಕಾದರೂ ಟಿಕೆಟ್ ಕೇಳಬಹುದು ಎಂದರು.

ಟಿಕೆಟ್ ಘೋಷಣೆಯಾಗದಿದ್ದರೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪುತ್ರನಿಂದ ನಾಮಪತ್ರ ಸಲ್ಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್,  ನಾಮಪತ್ರ ಸಲ್ಲಿಸುವದು ಸಹಜ ನಾಮಪತ್ರ ಸಲ್ಲಿಸುವುದಕ್ಕೆ ಯಾರೋ ಮುಹೂರ್ತ ಹೇಳುತ್ತಾರೆ.  ನಾವು ಕೆಲವೊಮ್ಮ ಹೀಗೆ ನಾಮಪತ್ರ ಸಲ್ಲಿಸುತ್ತೇವೆ ಅದೆಲ್ಲ ಇರುತ್ತೆ ಕಾಂಗ್ರೆಸ್ ಪಕ್ಷಕ್ಕೆ ಯಾರೂ ಒತ್ತಡ ಹೇರಲು  ಬ್ಲಾಕ್ ಮೇಲ್ ಮಾಡಲು ಆಗುವುದಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಟಿಕೆಟ್ ಕೇಳಬಹುದು. ಬಿಜೆಪಿ ಟಿಕೆಟ್ ಅನೌನ್ಸ್   ಆಗಿದೆ ಅವರೆಲ್ಲಾ ಒಮ್ಮತದ ಅಭ್ಯರ್ಥಿ ಹಾಕಿದ್ದಾರಾ  ಎಂದು ಪ್ರಶ್ನಿಸಿದರು.

Key words: Minister, M.B. Patil,  Congress, pressure, party