Thursday, September 10, 2026

BDA Apartments

Home Crime ಲಂಚ ಪಡೆಯುವ ವೇಳೆ ಮಹಿಳಾ ಅಧಿಕಾರಿ ಲೋಕಾಯುಕ್ತ ಬಲೆಗೆ

ಲಂಚ ಪಡೆಯುವ ವೇಳೆ ಮಹಿಳಾ ಅಧಿಕಾರಿ ಲೋಕಾಯುಕ್ತ ಬಲೆಗೆ

ಧಾರವಾಡ,ಮಾರ್ಚ್,6,2026 (www.justkannada.in):  ಲಂಚ ಪಡೆಯುತ್ತಿದ್ದ ವೇಳೆಯೇ ಮಹಿಳಾ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿ ಹೀನಾ ಕೌಸರ್ ಸಿಕ್ಕಿಬಿದ್ದ ಅಧಿಕಾರಿ. ಪಾಲಿಕೆಯ ವಲಯ ಕಚೇರಿ 1ರಲ್ಲಿ ಹೀನಾ ಕೌಸರ್ ಅಧಿಕಾರಿಯಾಗಿದ್ದಾರೆ. ಮಾಳೆಪ್ಪ ತಲವಾರ ಎಂಬುವವರಿಂದ 3500 ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದು ಹಣದ ಸಮೇತ ಹೀನಾ ಕೌಸರ್ ರನ್ನು ವಶಕ್ಕೆ ಪಡೆದಿದ್ದಾರೆ.

ರೊಟ್ಟಿ ಅಂಗಡಿಗೆ ಲೈಸೆನ್ಸ್ ನೀಡಲು ಮಾಳೆಪ್ಪ ತಲವಾರ ಬಳಿ ಅಧಿಕಾರಿ ಹೀನಾ ಕೌಸರ್  4500 ರೂ. ಲಂಚಕ್ಕೆ  ಬೇಡಿಕೆ ಇಟ್ಟಿದ್ದರು.  ಮುಂಗಡವಾಗಿ 1 ಸಾವಿರ ರೂ ಪಡೆದಿದ್ದರು.  ಇಂದು ಉಳಿದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Key words: Lokayukta, traps, female officer, bribe