Thursday, September 10, 2026

BDA Apartments

Home Front Page ಇಡೀ ದೇಶಕ್ಕೆ ಚೊಂಬು ಕೊಡುತ್ತಿರುವುದು ಕೇಂದ್ರ ಸರ್ಕಾರ- ಸಚಿವ ಎಂ.ಸಿ ಸುಧಾಕರ್

ಇಡೀ ದೇಶಕ್ಕೆ ಚೊಂಬು ಕೊಡುತ್ತಿರುವುದು ಕೇಂದ್ರ ಸರ್ಕಾರ- ಸಚಿವ ಎಂ.ಸಿ ಸುಧಾಕರ್

ಧಾರವಾಡ,ಮಾರ್ಚ್,7,2026 (www.justkannada.in):  ರಾಜ್ಯ ಬಜೆಟ್ ಟೀಕಿಸಿ ನಿನ್ನೆ  ಚೊಂಬು ಹಿಡಿದು ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ತಿರುಗೇಟು ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ಇಡೀ ದೇಶಕ್ಕೆ ಚೊಂಬು ಕೊಡುತ್ತಿರುವುದು ನಾವಲ್ಲ, ಕೇಂದ್ರ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಸಿ ಸುಧಾಕರ್, ವ್ಯಂಗ್ಯ ಮಾಡೋದು ಬಿಟ್ಟು ಬಿಜೆಪಿಗೆ ಇನ್ನೇನೂ ಗತಿ ಇಲ್ಲ. 2023ರಲ್ಲಿ ಸರ್ಕಾರದ ಮೇಲೆ ಸಾಲದ ಹೊರೆ ಇಟ್ಟು ಹೋಗಿದ್ದರು. ನಾವು 53 ಸಾವಿರ ಕೋಟಿ ರೂ.  ಗ್ಯಾರಂಟಿ ಯೋಜನೆಗಳಿಗೆ ಕೊಟ್ಟಿದ್ದೇವೆ.  1 ಲಕ್ಷ 21 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ವಿನಯೋಗಿಸಿದ್ದೇವೆ.  ಈ ನಡುವೆ ಬಿಜೆಪಿ 2 ಲಕ್ಷ 65 ಸಾವಿರ ಕೋಟಿ ಸಾಲ ಮಾಡಿತ್ತು. ಈಗ ಬಜೆಟ್ ಗಾತ್ರ 4.48 ಲಕ್ಷ ಕೋಟಿ ಆಗಿದೆ.  ಕೇಂದ್ರ ಸರ್ಕಾರದ ಸಾಲ ಎಷ್ಟು ಇದೆ. ಇಡೀ ದೇಶಕ್ಕೆ ಚೊಂಬು ಕೊಡುತ್ತಿರುವುದು  ಕೇಂದ್ರ ಸರ್ಕಾರ ಎಂದರು.

ಕಾಲೇಜು ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗೆ ಅವಕಾಶ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಸಿ ಸುಧಾಕರ್,  ವಿದ್ಯಾರ್ಥಿಗಳಿಗೆ ಅವಕಾಶ ಕೊಡುವ ಕೆಲಸ ಆಗಬೇಕು.  ಈ ಹಿಂದೆ ಕಾಲೇಜು ಚುನಾವಣೆ ಸಂದರ್ಭದಲ್ಲಿ ಇದ್ದವರು ಈಗ ರಾಷ್ಟ್ರ, ರಾಜ್ಯ ನಾಯಕರಾಗಿ ಬೆಳೆದಿದ್ದಾರೆ. ಶಾಂತಿಯುತವಾಗಿ ಗೊಂದಲ ಆಗದಂತೆ ಚುನಾವಣೆಗಳು ಆಗಬೇಕು ಎಂದರು.

Key words: central government, mug, entire country, Minister, M.C. Sudhakar