Sunday, August 23, 2026

BDA Apartments

Home Cinema ಗಾಳಿಪಟ ಹಾರಿಸಲು ‘ಜೋಡಿ’ಗಳನ್ನು ರೆಡಿ ಮಾಡಿದ್ದ ಭಟ್ಟರು !

ಗಾಳಿಪಟ ಹಾರಿಸಲು ‘ಜೋಡಿ’ಗಳನ್ನು ರೆಡಿ ಮಾಡಿದ್ದ ಭಟ್ಟರು !

ಬೆಂಗಳೂರು, ಅಕ್ಟೋಬರ್ 24, 2019 (www.justkannada.in): ಯೋಗರಾಜ್ ಭಟ್ ತಮ್ಮ ಗಾಳಿಪಟ 2 ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ಭಟ್ಟರು ಯೋಜನೆ ಮಾಡಿದ್ದಾರೆ.
ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜತೆಗೆ ದಿಗಂತ್, ಪವನ್ ‍ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದೀಗ ಅಧಿಕೃತವಾಗಿ ಭಟ್ಟರು ತಮ್ಮ ಹೀರೋಗಳಿಗೆ ಜೋಡಿ ಯಾರು ಎಂಬುದನ್ನು ಪ್ರಕಟಿಸಿದ್ದಾರೆ. ಗಣೇಶ್ ಜೋಡಿಯಾಗಿ ವೈಭವಿ ಶಾಂಡಿಲ್ಯ, ದಿಗಂತ್ ಗೆ ಸಂಯುಕ್ತ ಮೆನನ್, ಪವನ್ ಗೆ ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.