ಕನ್ನಡದಲ್ಲಿ ಸಲ್ಲು ಭಾಯ್ ಟ್ವೀಟ್ ನೋಡಿ ಕನ್ನಡಿಗರು ಖುಷ್ !

ಬೆಂಗಳೂರು, ಅಕ್ಟೋಬರ್ 24, 2019 (www.justkannada.in):ವೀಡಿಯೋ ಕಾನ್ಫರೆನ್ಸ್’ನಲ್ಲಿ ಸಲ್ಮಾನ್ ಖಾನ್ ಕನ್ನಡದಲ್ಲಿ ಮಾತಾಡಿ ಕನ್ನಡಿಗರ ಮನ ಗೆದ್ದಿದ್ದಾರೆ!

ಬೆಂಗಳೂರಿನ ಕೋರಮಂಗಲದಲ್ಲಿ ಕನ್ನಡ ಆವತರಣಿಕೆಯ ದಬಾಂಗ್ -3 ಟ್ರೈಲರ್ ರಿಲೀಸ್ ಆಗಿತ್ತು. ಇನ್ನು ಚಿತ್ರದ ಕುರಿತು ಸಲ್ಮಾನ್ ಕನ್ನಡದಲ್ಲಿ ಟ್ವೀಟ್ ಕೂಡ ಮಾಡಿದ್ದಾರೆ.

ದಯವಿಟ್ಟು, ದಬಾಂಗ್3 ಕನ್ನಡ ಟ್ರೈಲರ್ ನೋಡುವುದಕ್ಕಾಗಿ ನಿಮ್ಮ ಅಮೂಲ್ಯ ಸಮಯದಲ್ಲಿ 3 ನಿಮಿಷಗಳನ್ನು ನಮಗಾಗಿ ಕೊಡಬಹುದಾ ಎಂದು ಟ್ವೀಟ್ ಮಾಡಿದ್ದಾರೆ. ಸಲ್ಲು ಭಾಯ್ ಕನ್ನಡ ಟ್ವೀಟ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.