ಬೆಂಗಳೂರಿನ ಐಟಿ ಕಚೇರಿಗೆ ಬಾಂಬ್ ಬೆದರಿಕೆ…

ಬೆಂಗಳೂರು,ಅ,24,2019(www.justkannada.in):  ಬೆಂಗಳೂರಿನ ಐಟಿ ಕಚೇರಿಗೆ ವ್ಯಕ್ತಿಯೋರ್ವ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಬೆಂಗಳೂರಿನ ಕ್ವೀನ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ತಡರಾತ್ರಿ ವ್ಯಕ್ತಿಯೋರ್ವ ಬಾಂಬ್ ಬೆದರಿಕೆ ಹಾಕಿದ್ದಾನೆ. ಇ-ಮೇಲ್ ಮೂಲಕ ಐಟಿ ಡೆಪ್ಯೂಟಿ ಕಮಿಷನರ್ ಗೆ ಬಾಂಬ್ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಶ್ವಾನದಳ, ಬಾಂಬ್ ನಿಷ್ಕ್ರಿಯಾ ದಳ ಕೂಡಲೇ ಆಗಮಿಸಿ ಪರಿಶೀಲನೆ ನಡೆಸಿದೆ.

ಈ ನಡುವೆ ಇ-ಮೇಲ್ ಮೂಲಕ ಆರೋಪಿ ಹುಸಿಬಾಂಬ್ ಕರೆ ಮಾಡಿದ್ದು, ಇದೀಗ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Bomb- threat -IT office – Bangalore.