Sunday, September 20, 2026

BDA Apartments

ಮಹಿಳೆ ಮೇಲೆ ಹಲ್ಲೆ ವಿವಸ್ತ್ರಗೊಳಿಸಿದ ಕೇಸ್ : ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್...
Home Crime ಮಹಿಳೆ ಮೇಲೆ ಹಲ್ಲೆ ವಿವಸ್ತ್ರಗೊಳಿಸಿದ ಕೇಸ್ : ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ ವಿಧಿಸಿದ...

ಮಹಿಳೆ ಮೇಲೆ ಹಲ್ಲೆ ವಿವಸ್ತ್ರಗೊಳಿಸಿದ ಕೇಸ್ : ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಬೆಳಗಾವಿ,ಫೆಬ್ರವರಿ,4,2026 (www.justkannada.in):  ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯ ಮೇಲೆ ಅಮಾನವೀಯ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  12 ಮಂದಿ ಆರೋಪಿಗಳಿಗೆ  5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಬೆಳಗಾವಿಯ 10ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

10ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹೆಚ್ ಎಸ್ ಮಂಜುನಾಥ್ ಅವರು ಈ ತೀರ್ಪು ಪ್ರಕಟಿಸಿದ್ದಾರೆ.  12 ಅಪರಾಧಿಗಳಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಪ್ರತಿ ಸೆಕ್ಷನ್ ಗೂ ಒಂದೊಂದು ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.

ದೋಷಿಗಳಾದ ಬಸಪ್ಪನಾಯಕ, ರಾಜನಾಯಕ, ಕೆಂಪಣ್ಣ ನಾಯಕ,  ಪಾರ್ವತಿ ನಾಯಕ, ಯಲ್ಲವ್ವ ನಾಯಕ, ಲಕ್ಕಪ್ಪ ನಾಯಕ, ಸಂಗೀತಾ, ಹೆಗ್ಗಾ ನಾಯಕ, ಸಂತೋಷ ನಾಯಕ, ಶೋಭಾ ನಾಯಕ ,ಲಕ್ಕವ್ವ ನಾಯಕ, ಶಿವಪ್ಪಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

2023 ಡಿ 10 ರಂದು ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಈ ಘಟನೆ  ನಡೆದಿತ್ತು. ಯುವಕನೊಬ್ಬ ಯುವತಿಯೊಂದಿಗೆ ಓಡಿಹೋಗಿದ್ದಕ್ಕೆ ಯುವತಿಯ ಕುಟುಂಬದವರು ಯುವಕನ ತಾಯಿಯ ಮೇಲೆ ಅಮಾನವೀಯವಾಗಿ ದಾಳಿ ಮಾಡಿ ವಿವಸ್ತ್ರಗೊಳಿಸಿ ಹಲ್ಲೆಗೈದಿದ್ದರು. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Key words: Woman, assaulted, Court, sentences, accused