Monday, September 21, 2026

BDA Apartments

ಆನ್ ಲೈನ್ ಗೇಮಿಂಗ್ ಗೆ ಮೂವರು ಸಹೋದರಿಯರು ಬಲಿ BDA JK_Adv BDA Adv
Home Crime ಆನ್ ಲೈನ್ ಗೇಮಿಂಗ್ ಗೆ ಮೂವರು ಸಹೋದರಿಯರು ಬಲಿ

ಆನ್ ಲೈನ್ ಗೇಮಿಂಗ್ ಗೆ ಮೂವರು ಸಹೋದರಿಯರು ಬಲಿ

ಗಾಜಿಯಾಬಾದ್,ಫೆಬ್ರವರಿ,4,2026 (www.justkannada.in): ಆನ್ ಲೈನ್ ಗೇಮಿಂಗ್ ಗೆ ಮೂವರು ಸಹೋದರಿಯರು ಬಲಿಯಾಗಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ ನಲ್ಲಿ ನಡೆದಿದೆ.

ಮಧ್ಯರಾತ್ರಿಯಲ್ಲಿ ಗಾಜಿಯಾಬಾದ್‌ನ ಭಾರತ್ ಸಿಟಿ ಅಪಾರ್ಟ್‌ಮೆಂಟ್‌ ನಲ್ಲಿ ಈ ಘಟನೆ ನಡೆದಿದೆ. ಆನ್‌ಲೈನ್‌ ಗೇಮ್‌ ಆಡಬೇಡಿ ಎಂದು ಪೋಷಕರು ಗದರಿದಕ್ಕೆ ಮೂವರು ಬಾಲಕಿಯರು ವಾಸವಿದ್ದ ಪ್ಲಾಟ್‌ ನ ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಶಿಕಾ (16), ಪ್ರಾಚಿ (14) ಮತ್ತು ಪಾಖಿ (12)  ಆತ್ಮಹತ್ಯೆಗೆ ಶರಣಾದವರು. ಮೂವರು ಸಹ ಚೇತನ್ ಕುಮಾರ್ ಎನ್ನುವವರ ಮಕ್ಕಳಾದ್ದಾರೆ ಒಂಬತ್ತನೇ ಮಹಡಿಯಿಂದ ಕೆಳಗೆ ಹಾರಿದ್ದು, ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಲೋನಿಯಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ

ಮೂವರು ಬಾಲಕಿಯರು ಕೂಡ ಕೋವಿಡ್ ಸಂದರ್ಭದಲ್ಲಿ ಕೊರಿಯನ್ ಮೂಲದ ಆನ್‌ ಲೈನ್‌ ಗೇಮ್‌ ಆಡಲು ಶುರು ಮಾಡಿದ್ದ ಮೂವರು ಸಹೋದರಿಯರು ಅದಕ್ಕೆ ವ್ಯಸನಿಗಳಾಗಿದ್ದರು. ಬಾಲಕಿಯರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Key words: Three, sisters, die , online, gaming