MYSORE DASARA: ಆ.೧೦ ರಂದು ಅರಮನೆಯಲ್ಲಿ ವೀಕೆಂಡ್‌ ಡಬ್ಬಲ್‌ ಧಮಾಕ..!

Nine elephants led by Captain Abhimanyu have arrived in the palace city in the first group. These elephants are currently resting in the forest Department pavilion and will enter the palace on August 10. The elephants will enter the palace from the Godholi Lagna between 6.45 and 7.20 pm on Sunday, August 10. The elephants will enter the palace from the Jayamarthanda gate on the eastern side of the palace.

 

ಮೈಸೂರು, ಆ.೦೫,೨೦೨೫: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳ ಮೊದಲ ತಂಡ ಈಗಾಗಲೇ ನಗರಕ್ಕೆ ಆಗಮಿಸಿದ್ದು, ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ.

ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳು ಮೊದಲ ತಂಡದಲ್ಲಿ ಅರಮನೆ ನಗರಿಗೆ ಬಂದಿದೆ. ಈ ಆನೆಗಳು ಸದ್ಯ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಆ. ೧೦ ರಂದು ಅರಮನೆ ಪ್ರವೇಶಿಸಲಿವೆ.

ಆ.೧೦ ರ ಭಾನುವಾರ ಸಂಜೆ ೬.೪೫ ರಿಂದ ೭.೨೦ ರ ಗೋಧೊಳಿ ಲಗ್ನದಲ್ಲಿ ಗಜಪಡೆಗಳು ಅರಮನೆಗೆ ಎಂಟ್ರಿ ಪಡೆಯಲಿವೆ. ಅರಮನೆ ಪೂರ್ವ ದಿಕ್ಕಿನಲ್ಲಿರುವ ಜಯಮಾರ್ತಾಂಡ ದ್ವಾರದಿಂದ ಈ ಗಜಪಡೆಗಳು ಅರಮನೆ ಪ್ರವೇಶಿಸಲಿವೆ.

ಈಗಾಗಲೇ ಅರಮನೆ ಆವರಣದಲ್ಲಿ ಆನೆಗಳಿಗೆ ಹಾಗೂ ಮಾವುತ,ಕಾವಾಡಿ ಕುಟುಂಬಗಳ ವಾಸ್ತವ್ಯಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ. ಭಾನುವಾರದಿಂದ ನಾಡಹಬ್ಬ ದಸರಾ ಮಹೋತ್ಸವ ಮುಗಿಯುವ ತನಕ ಈ ಆನೆಗಳು ಇಲ್ಲಿಯೇ ತಂಗಲಿವೆ.

vtu

ವೀಕೆಂಡ್‌ ಸ್ಪೆಷಲ್‌ :

ದಸರಾ ಗಜಪಡೆಗಳ ಗಜಪಯಣ ಕಾರ್ಯಕ್ರಮ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನತೆ ನೆರೆದಿದ್ದು ಅದೊಂದು ದಾಖಲೆ ಸಂಖ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಡಳಿತ ಸಾರ್ವಜನಿಕರ ಅನುಕೂಲಕ್ಕಾಗಿ ಆನೆಗಳ ಅರಮನೆ ಪ್ರವೇಶವನ್ನು ಆ. ೮ರಿಂದ ಆ.೧೦ ಕ್ಕೆ ಮುಂದೂಡಿದೆ.

ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ದಸರಾ ಸಮಿತಿ ಮುಖ್ಯಸ್ಥರಾದ ಲಕ್ಷ್ಮೀಕಾಂತ ರೆಡ್ಡಿ, ಅಂದು ಭಾನುವಾರವಾದ್ದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹ ಗಜಪಡೆಗಳ ಅರಮನೆ ಪ್ರವೇಶವನ್ನು ಕಣ್ತುಂಬಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ ಮಾಡಲಾಗಿದೆ ಎಂದರು.

ಡಬ್ಬಲ್‌ ಧಮಾಕ:

ಭಾನುವಾರ ಸಂಜೆ  ಗೋಧೊಳಿ ಲಗ್ನದಲ್ಲಿ ಗಜಪಡೆಗಳು ಅರಮನೆ ಪ್ರವೇಶಿಸುವ ವೇಳೆಗೆ ಸರಿಯಾಗಿ ಅರಮನೆ ದೀಪಾಲಂಕಾರ ಸಹ ಕಂಗೊಳಿಸಲಿದೆ. ದೀಪಾಲಂಕಾರದ ಸೌಂಧರ್ಯದ ನಡುವೆಯೇ ಆನೆಗಳ ಅರಮನೆ ಪ್ರವೇಶದ ಸೊಬಗನ್ನು ಸವಿಯುವ ಅವಕಾಶ ಇದರಿಂದ ಲಭಿಸುತ್ತದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಅವರು “ಜಸ್ಟ್‌ ಕನ್ನಡ”ಗೆ ತಿಳಿಸಿದರು.

ಒಟ್ಟಾರೆ ಈ ಎರಡು ಘಟನೆಗಳು ಒಂದೇ ಸಮಯದಲ್ಲಿ ನಡೆಯುವುದರಿಂದ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಆಕರ್ಷಣೆಯ ಡಬ್ಬಲ್‌ ಧಮಾಕ ಲಭಿಸಲಿದೆ .

KEY WORDS: MYSORE DASARA, Weekend, double bang, palace, Mysore Palace, Illumiation

vtu

SUMMARY:

MYSORE DASARA: Weekend double bang at the palace on August 10th.

Nine elephants led by Captain Abhimanyu have arrived in the palace city in the first group. These elephants are currently resting in the forest Department pavilion and will enter the palace on August 10.

The elephants will enter the palace from the Godholi Lagna between 6.45 and 7.20 pm on Sunday, August 10. The elephants will enter the palace from the Jayamarthanda gate on the eastern side of the palace.