Tuesday, August 11, 2026

BDA Apartments

Home Front Page ಹೈಕಮಾಂಡ್ ಕರೆದ್ರೆ ದೆಹಲಿಗೆ ಹೋಗುವೆ- ಸಿಎಂ ಸಿದ್ದರಾಮಯ್ಯ

ಹೈಕಮಾಂಡ್ ಕರೆದ್ರೆ ದೆಹಲಿಗೆ ಹೋಗುವೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಫೆಬ್ರವರಿ,10,2026 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. ಅಸ್ಸಾಂ ಚುನಾವಣೆ ಸಂಬಂಧ ಸಭೆ ಇರುವುದರಿಂದ ದೆಹಲಿಗೆ ತೆರಳುತ್ತಿದ್ದಾರೆ. ಬಜೆಟ್ ಪೂರ್ವಭಾವಿ ಸಭೆ ಅವರ ಅನುಪಸ್ಥಿತಿಯಲ್ಲಿ ನಡೆಯಲಿದೆ ಎಂದರು.

ಇನ್ನು ತಾವು ದೆಹಲಿ ಭೇಟಿ ವಿಚಾರ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್  ಕರೆದರೆ ದೆಹಲಿಗೆ ಹೋಗುವೆ. ಹೈಕಮಾಂಡಗ ಕರೆಯದೇ ನಾನೇಗೆ ದೆಹಲಿಗೆ ಹೋಗಲಿ. ನನಗೆ ಬಜೆಟ್ ಸಿದ್ದತೆ ಕೆಲಸಗಳು ಇವೆ ಎಂದರು.

Key words: DK Shivakumar, Delhi, high command, CM Siddaramaiah