Sunday, August 9, 2026

BDA Apartments

Home Front Page ಸಿಎಂ ಕುತಂತ್ರ ರಾಜಕಾರಣ ಬಿಟ್ಟು ಆರೋಪ ಮುಕ್ತರಾಗಿ ಹೊರಬರಲಿ- ಬಿಎಸ್ ವೈ ವಾಗ್ದಾಳಿ

ಸಿಎಂ ಕುತಂತ್ರ ರಾಜಕಾರಣ ಬಿಟ್ಟು ಆರೋಪ ಮುಕ್ತರಾಗಿ ಹೊರಬರಲಿ- ಬಿಎಸ್ ವೈ ವಾಗ್ದಾಳಿ

ಬಳ್ಳಾರಿ,ನವೆಂಬರ್,9,2024 (www.justkannada.in):  ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ  ಪ್ರಾಸಕ್ಯೂಷನ್ ಗೆ ಶಿಫಾರಸ್ಸು ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಕುತಂತ್ರ ರಾಜಕಾರಣ ಬಿಟ್ಟು ಆರೋಪ ಮುಕ್ತರಾಗಿ ಹೊರಬರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಬಳ್ಳಾರಿ ಜಿಲ್ಲೆ ಸಂಡೂರಿನ ತಾರಾನಗರದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಈ ಬೆದರಿಕೆಗೆ ಬಿಎಸ್ ವೈ ಜಗ್ಗಲ್ಲ, ಬಗ್ಗಲ್ಲ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಸಿಎಂ ಸಿದ್ಧರಾಮಯ್ಯ ಹಳೆಯದನ್ನು ಕೆದಕುವ ಪ್ರಯತ್ನ ಮಾಡಿದ್ದಾರೆ. ಇದರಿಂಧ ಕಾಂಗ್ರೆಸ್ ನವರಿಗೆ ಯಾವುದೇ ಲಾಭ ಆಗಲ್ಲ ಕುತಂತ್ರ ರಾಜಕಾರಣ ಬಿಟ್ಟು ಆರೋಪ ಮುಕ್ತರಾಗಿ ಹೊರ ಬರಲಿ.  ಸಿಎಂ ಆರೋಪ ಮುಕ್ತಾರಾಗಿ ಹೊರ ಬಂದು ಒಳ್ಳೇ ಕೆಲಸ ಮಾಡಲೆಂದು ಶುಭ ಹಾರೈಸುವೆ ಎಂದು ಟಾಂಗ್ ಕೊಟ್ಟರು.

ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಾವು ಒತ್ತಾಯಿಸಿದ್ದೇವೆ. ಸಿಬಿಐ ತನಿಖೆಗೆ ವಹಿಸಿದ 24 ಗಂಟೆಗಳಲ್ಲಿ ಮುಖ್ಯಮಂತ್ರಿಯನ್ನು ಬಂಧನ ಮಾಡಿ ಜೈಲಿಗೆ ಕಳುಹಿಸುವುದು ನಿಶ್ಚಿತ ಎಂದು ಬಿಎಸ್ ವೈ ಹೇಳಿದರು.

Key words: Covid scam,  prosecution, CM Siddaramaiah, BSY