Wednesday, October 7, 2026

BDA Apartments

immense respect BDA JK_Adv BDA Adv
Home Front Page ಮುಡಾದಲ್ಲಿ ಸಾಕಷ್ಟು ಫೈಲ್ ಗಳು ಕಾಣೆ ಬಗ್ಗೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ- ಶಾಸಕ ಶ್ರೀವತ್ಸ

ಮುಡಾದಲ್ಲಿ ಸಾಕಷ್ಟು ಫೈಲ್ ಗಳು ಕಾಣೆ ಬಗ್ಗೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ- ಶಾಸಕ ಶ್ರೀವತ್ಸ

ಮೈಸೂರು, ನವೆಂಬರ್,9.2024 (www.jutkannada.in): ಮುಡಾದಲ್ಲಿ ಸಾಕಷ್ಟು ಫೈಲ್ ಗಳು ಕಾಣೆಯಾಗಿರುವ  ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶ್ರೀವತ್ಸ,  ಮುಡಾದಲ್ಲಿ ಸಾಕಷ್ಟು ಫೈಲ್ ಗಳು ಮಿಸ್ ಆಗಿವೆ. ಸಾಕಷ್ಟು ಫೈಲ್ ಕಾಣೆಯಾದ ಬಗ್ಗೆ  ಮುಡಾ ಮೀಟಿಂಗ್ ನಲ್ಲಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.  ಅರೆಸ್ಟ್ ಮಾಡಿ ತನಿಖೆ ನಡೆಸಿದ್ರೆ ಸತ್ಯಾಂಶ ಹೊರಬರುತ್ತೆ ಎಂದರು.

ಈಗಲೂ 50: 50 ಸೈಟ್ ಮಾರಾಟಕ್ಕೆ ಕೆಲವರು ಯತ್ನಿಸುತ್ತಿದ್ದಾರೆ. ಈ ಸಂಬಂಧ ಮುಡಾ ಆಯ್ತಕರು, ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದು ಶಾಸಕ ಶ್ರೀವತ್ಸ ತಿಳಿಸಿದರು.

Key words: MUDA, files, Missing, MLA Srivatsa