Tuesday, September 22, 2026

BDA Apartments

Home Front Page ಹಿಟ್ ಅಂಡ್ ರನ್ ಮಾಡುವುದರಲ್ಲಿ ಹೆಚ್ ಡಿಕೆ ನಿಸ್ಸಿಮರು- ಶಾಸಕ ಹೆಚ್ ಸಿ ಬಾಲಕೃಷ್ಣ ವಾಗ್ದಾಳಿ

ಹಿಟ್ ಅಂಡ್ ರನ್ ಮಾಡುವುದರಲ್ಲಿ ಹೆಚ್ ಡಿಕೆ ನಿಸ್ಸಿಮರು- ಶಾಸಕ ಹೆಚ್ ಸಿ ಬಾಲಕೃಷ್ಣ ವಾಗ್ದಾಳಿ

ಬೆಂಗಳೂರು,ಅಕ್ಟೋಬರ್,22,2024 (www.justkannada.in):  ಕಾಂಗ್ರೆಸ್ ನಾಯಕರ ಜೊತೆ ಸಿಪಿ ಯೋಗೇಶ್ವರ್ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಹೆಚ್.ಸಿ ಬಾಲಕೃಷ್ಣ, ಹಿಟ್ ಅಂಡ್ ರನ್ ಮಾಡುವುದರಲ್ಲಿ ಹೆಚ್ ಡಿ ಕುಮಾರಸ್ವಾಮಿ ನಿಸ್ಸಿಮರು. ಹಿಟ್ ಅಂಡ್ ರನ್  ಮಾಡುವುದರಲ್ಲಿ ಹೆಚ್ ಡಿಕೆ ನಿಸ್ಸಿಮರು. ಸಿಪಿ ಯೋಗೇಶ್ವರ್  ಕಾಂಗ್ರೆಸ್ ಗೆ ಹೋಗುವಂತಹ ಸನ್ನೀವೇಶ ಸೃಷ್ಠಿ ಮಾಡಿದ್ದಾರೆ ಎಂದು ಟೀಕಿಸಿದರು.

ವರ್ಚಸ್ಸು ಹಾಳು ಮಾಡುತ್ತಿದ್ದಾರೆ  ಎಂದು ಹೆಚ್ ಡಿಕೆ ಹೇಳಿದ್ದಾರೆ.  ಹಾಗಾದರೆ ಯೋಗೇಶ್ವರ್ ರನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದವರು ಯಾರು?  ಹೆಚ್ ಡಿಕೆ ಉಡಾಫೆ ಮಾತುಗಳನ್ನಾಡುವುದನ್ನ ಬಿಡಲಿ ಎಂದು ಬಾಲಕೃಷ್ಣ ಹರಿಹಾಯ್ದರು.

Key words: CP Yogeshwar,  HDK, MLA, HC Balakrishna