Thursday, August 6, 2026

BDA Apartments

Home Election 2024 ಲೋಕಸಭೆ ಚುನಾವಣೆ: ರಾಜಕೀಯ ನಾಯಕರು, ಕಲಾವಿದರು,  ಸೇರಿ ಗಣ್ಯಾತಿಗಣ್ಯರಿಂದ ವೋಟಿಂಗ್.

ಲೋಕಸಭೆ ಚುನಾವಣೆ: ರಾಜಕೀಯ ನಾಯಕರು, ಕಲಾವಿದರು,  ಸೇರಿ ಗಣ್ಯಾತಿಗಣ್ಯರಿಂದ ವೋಟಿಂಗ್.

ಬೆಂಗಳೂರು,ಏಪ್ರಿಲ್,26,2024 (www.justkannada.in): ಇಂದು ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು ರಾಜಕೀಯ ನಾಯಕರು, ಕಲಾವಿದರು ಸೇರಿ ಗಣ್ಯಾತೀಗಣ್ಯರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ರಾಜ್ಯದ 14  ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ, ಕನಕಪುರದಲ್ಲಿ ಸಂಸದ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಮತದಾನ ಮಾಡಿದರು.

ಜೆಪಿನಗರದ  ಆಕ್ಸಫರ್ಡ್ ಶಾಲೆಯಲ್ಲಿ  ನಟ ಕಿಚ್ಚ ಸುದೀಪ್ ತಮ್ಮ ಹಕ್ಕು ಚಲಾಯಿಸಿದರು.   ಎಲ್ಲರೂ ತಪ್ಪದೆ ಮತದಾನ ಮಾಡುವಂತೆ  ಮನವಿ ಮಾಡಿದರು.ಆರ್ ಆರ್ ನಗರದ ಕೆವಿಟಿ ಶಾಲೆಯಲ್ಲಿ ನಟಿ ರಚಿತ ರಾಮ್ ಮತದಾನ ಮಾಡಿದರೇ  ಸುಬ್ಬಣ್ಣ ಗಾರ್ಡನ್ ನ ಕೆವಿವಿ ಶಾಲೆಯಲ್ಲಿ  ನಿರ್ದೇಶಕ ಪ್ರೇಮ್ ನಟಿ ರಕ್ಷಿತಾ ಮತದಾನ ಮಾಡಿದರು.

ಕತ್ರಿಗುಪ್ಪೆಯಲ್ಲಿ ಉಪೇಂದ್ರ, ಹೊಸಕೆರೆಹಳ್ಳಿ ಸೃಜನ್ ಲೋಕೇಶ್, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತದಾನ ಮಾಡಿದರು. ಸುತ್ತೂರು ಶ್ರೀಗಳು, ನಿರ್ಮಲಾನಂದನಾಥ ಶ್ರೀಗಳು,  ಮಾಜಿ ಕ್ರಿಕೆಟಿಗರಾದ  ಅನಿಲ್ ಕುಂಬ್ಳೆ , ರಾಹುಲ್ ದ್ರಾವಿಡ್ ತಮ್ಮ ಮತದಾನದ ಹಕ್ಕು ಚಲಾಯಿಸಿದರು.

Key words: LokSabha, Elections, Voting, Artists