Monday, September 21, 2026

BDA Apartments

ನನಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸವಿದೆ- ಮಾಜಿ ಸಿಎಂ ವ...
Home Front Page ನನಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸವಿದೆ- ಮಾಜಿ ಸಿಎಂ ವೀರಪ್ಪ ಮೊಯ್ಲಿ.

ನನಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸವಿದೆ- ಮಾಜಿ ಸಿಎಂ ವೀರಪ್ಪ ಮೊಯ್ಲಿ.

ಚಿಕ್ಕಬಳ್ಳಾಪುರ,ಮಾರ್ಚ್,21,2024(www.justkannada.in): ನನಗೆ ಶೇ.90ರಷ್ಟು ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಬೆಂಬಲವಿದೆ. ಹೀಗಾಗಿ ನನಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್ ಟಿಕೆಟ್ ನನಗೆ ಸಿಗುವ ವಿಶ್ವಾಸವಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎಲ್ಲರ ಅಭಿಪ್ರಾಯ ನನ್ನ ಮೇಲಿದೆ ಕೇಂದ್ರದಲ್ಲಿ ಮೋದಿಯನ್ನು ಎದುರಿಸುವ ಶಕ್ತಿ ನನಗಿದೆ. ಚುನಾವಣಾ ರಾಜಕಾರಣದಿಂದ ನಾನು ನಿವೃತ್ತಿಯಾಗಲ್ಲ.  ನನಗೆ ಗೆಲ್ಲುವ ಅವಕಾಶ ಇಲ್ಲಾದಾಗ ನಿವೃತ್ತಿಯಾಗುತ್ತೇನೆ ಎಂದರು.ನನಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸವಿದೆ veerappa

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ದವೂ ವಾಗ್ದಾಳಿ ನಡೆಸಿದ ವೀರಪ್ಪ ಮೊಯ್ಲಿ, ಮೋದಿ ಒಳ್ಳೆಯ ಆ್ಯಂಕರ್. ಒಳ್ಳೆಯ ಆಡಳಿತಗಾರ ಅಲ್ಲ.  ಮೋದಿ ಇವೆಂಟ್ ಮ್ಯಾನೇಜ್ ಮೆಂಟ್ ಮಾಡುತ್ತಿದ್ದಾರೆ. ದೇಶದ ಆಸ್ತಿ ಕೆಲವು ಶ್ರೀಮಂತರ ಕೈಯಲ್ಲಿದೆ ಎಂದು ಕಿಡಿಕಾರಿದರು.

ಅಟಲ್ ಬಿಹಾರಿ ವಾಜಪೇಯಿ ಪ್ರಾಮಾಣಿಕವಾಗಿದ್ರು.  ಅಂತಾ ವಾಜಿಪೇಯಿಯೇ ಸೋತರು. ಇನ್ನೂ ಮೋದಿ ಯಾವ ಮಹಾನ್ ನಾಯಕ ಎಂದು ವೀರಪ್ಪ ಮೊಯ್ಲಿ ಲೇವಡಿ ಮಾಡಿದರು.

Key words: I am -confident – ticket – Chikkaballapur Constituency – Former CM- Veerappa Moily.