Monday, September 21, 2026

BDA Apartments

ಟಿಕೆಟ್ ಮಿಸ್: ನಾಲ್ಕು ದಿನ ಕಾದು ನಂತರ ನನ್ನ ನಿರ್ಧಾರ- ಸಂಸದ ಸಂಗಣ್ಣ ಕರಡಿ BDA JK_A...
Home Front Page ಟಿಕೆಟ್ ಮಿಸ್: ನಾಲ್ಕು ದಿನ ಕಾದು ನಂತರ ನನ್ನ ನಿರ್ಧಾರ- ಸಂಸದ ಸಂಗಣ್ಣ ಕರಡಿ.

ಟಿಕೆಟ್ ಮಿಸ್: ನಾಲ್ಕು ದಿನ ಕಾದು ನಂತರ ನನ್ನ ನಿರ್ಧಾರ- ಸಂಸದ ಸಂಗಣ್ಣ ಕರಡಿ.

ಕೊಪ್ಪಳ,ಮಾರ್ಚ್,21,2024(www.justkannada.in): ಲೋಕಸಭೆ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಹಾಲಿ ಸಂಸದ ಸಂಗಣ್ಣ ಕರಡಿ ನಾಲ್ಕು ದಿನ ಕಾದು ನಂತರ ತನ್ನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಇಂದು ಬೆಂಬಲಿಗರ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಬಿಜೆಪಿ ನಾಯಕರಿಗೆ ಮತ್ತೆ ನಾಲ್ಕು ದಿನದ ಗಡುವು ನೀಡಿದ್ದಾರೆ.

ಬಳಿಕ ಮಾತನಾಡಿದ ಸಂಗಣ್ಣ ಕರಡಿ, ರಾಜ್ಯದ ಹಲವು ನಾಯಕರು ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಟಿಕೆಟ್ ವಿಚಾರದ ಬಗ್ಗೆ ಮರು ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ನಾಲ್ಕು ದಿನ ಕಾದು ಮುಂದಿನ ರಾಜಕೀಯ‌ ನಡೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಟಿಕೆಟ್ ಮಿಸ್ sanganna karadi.jpg1

ಎರಡು ಬಾರಿ ಸಂಸದನಾಗಿ ಜನಪರ ಕೆಲಸ ಮಾಡಿದರೂ ಕೆಲವರ ಕುತಂತ್ರದಿಂದ ನನಗೆ ಟಿಕೆಟ್ ಕೈ ತಪ್ಪಿದೆ‌. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನಗೆ ಕಾರ್ಯಕರ್ತರು ಹಾಗೂ ಬೆಂಬಲಿಗರೇ ಪ್ರಜೆಗಳು. ಅವರ ನಿರ್ಧಾರದಂತೆ ನಾಲ್ಕು ದಿನಗಳ ಬಳಿಕ ನಿರ್ಧಾರಕ್ಕೆ ಬರುವೆ ಎಂದರು.

Key words: Ticket-miss- My decision – waiting -four days- MP- Sanganna Kardi