ಆಂಧ್ರಪ್ರದೇಶ,ಆಗಸ್ಟ್,1,2026 (www.justkannada.in): ಉತ್ತರಾಂಧ್ರ ಭಾಗದ ಬುಡಕಟ್ಟು ಆದಿವಾಸಿಗಳ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
ಇಂದು ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಭೋಗಪುರಂನಲ್ಲಿ ಅಲ್ಲೂರು ಸೀತರಾಮು ರಾಜು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಇತರೇ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ ಮಾತನಾಡಿದರು.
ಆದಿವಾಸಿಗಳ ಅಭಿವೃದ್ದಿಗೆ ನಮ್ಮ ಸರ್ಕಾರ ಸದಾ ಬದ್ದವಗಿದೆ. ಇದು ಸ್ವತಂತ್ರ್ಯ ಯೋಧ ಅಲ್ಲೂರಿ ಸೀತಾರಾಮು ರಾಜು ಜನ್ಮಸ್ಥಳ. ಆ ಪವಿತ್ರ ನೆಲದಲ್ಲೇ ಏರ್ ಪೋರ್ಟ್ ನಿರ್ಮಾಣ ಮಾಡಿದ್ದೇವೆ ಉತ್ತರಾಂಧ್ರ ಭಾಗದ ಬುಡಕಟ್ಟು ಆದಿವಾಸಿಗಳ ಅಭಿವೃದ್ದಿಗೆ ಕ್ರಮ ವಹಿಸುತ್ತೇವೆ ಎಂದರು.
ಹಿಂದೆ ಹಲವು ಸರ್ಕಾರಗಳು ತಮ್ಮ ನಾಯಕರ ಹೆಸರು ಇಟ್ಟಿದ್ದರು. ಏರ್ ಪೋರ್ಟ್ ಗಳಿಗೆ ಅವರ ಪಕ್ಷಗಳ ನಾಯಕರ ಹೆಸರಿಟ್ಟಿದ್ದರು. ನಾವು ಸ್ವಾತಂತ್ರ್ಯ ಹೋರಾಟಗಾರರು ಉತ್ತಮ ಮಹಾನ್ ನಾಯಕರ ಹೆಸರುಗಳನ್ನ ನಾಮಕರಣ ಮಾಡುತ್ತಿದ್ದೇವೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
Key words: Our government, development, tribals, PM Modi







