Sunday, September 20, 2026

BDA Apartments

ಹೆತ್ತ ತಂದೆಗೆ ಚಾಕುವಿನಿಂದ ಇರಿದ ಪುತ್ರ: ಆಸ್ಪತ್ರೆಗೆ ದಾಖಲು BDA JK_Adv BDA Adv
Home Crime ಹೆತ್ತ ತಂದೆಗೆ ಚಾಕುವಿನಿಂದ ಇರಿದ ಪುತ್ರ: ಆಸ್ಪತ್ರೆಗೆ ದಾಖಲು.

ಹೆತ್ತ ತಂದೆಗೆ ಚಾಕುವಿನಿಂದ ಇರಿದ ಪುತ್ರ: ಆಸ್ಪತ್ರೆಗೆ ದಾಖಲು.

ಮೈಸೂರು,ಮಾರ್ಚ್,20,2024(www.justkannada.in):   ಆಸ್ತಿ ವಿಚಾರಕ್ಕೆ ಹೆತ್ತ ತಂದೆಗೆ ಪುತ್ರನೊಬ್ಬ ಚಾಕು ವಿನಿನಂದ ಇರಿದಿರುವ ಘಟನೆ  ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ನಡೆದಿದೆ.

ರಾಚಪ್ಪಾಜಿ 60 ಮಗನಿಂದಲೇ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ರಾಚಪ್ಪಾಜಿ ಪುತ್ರ ಸುಭಾಷ್ ಮತ್ತು ಆತನ ಸ್ನೇಹಿತರು  ಚಾಕು ಇರಿದಿದ್ದಾರೆ. ರಾಚಪ್ಪಾಜಿ ಜೊತೆ ಇದ್ದ ಸ್ನೇಹಿತ ಮಹದೇವ್ ಗು ಚಾಕುವಿನಿಂದ ಆರೋಪಿಗಳು ಇರಿದಿದ್ದಾರೆ.ಹೆತ್ತ ತಂದೆಗೆ ಚಾಕುವಿನಿಂದ ಇರಿದ ಪುತ್ರ a chaku

ಇನ್ನು ಗಂಭೀರ ಗಾಯಗೊಂಡ ರಾಚಪ್ಪಾಜಿ ಅವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಇದೀಗ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Son –stabs- father –knife-mysore