Wednesday, September 9, 2026

BDA Apartments

Home Cinema ‘ಐ ಲವ್‌ ಯು’ ಹೇಳುತ್ತಾ ತೆರೆ ಮೇಲೆ ಬರಲು ಸಜ್ಜಾದ ಉಪ್ಪಿ

‘ಐ ಲವ್‌ ಯು’ ಹೇಳುತ್ತಾ ತೆರೆ ಮೇಲೆ ಬರಲು ಸಜ್ಜಾದ ಉಪ್ಪಿ

ಬೆಂಗಳೂರು, ಮೇ 13, 2019 (www.justkannada.in): ‘ಐ ಲವ್‌ಯು’ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿರುವ ಚಿತ್ರ. ಉಪೇಂದ್ರ ಅವರ ಬಹುತೇಕ ಸಿನಿಮಾಗಳು ತೆಲುಗಿಗೆ ಡಬ್‌ ಹಾಗೂ ರೀಮೇಕ್‌ ಆಗಿವೆ.

ನೇರವಾಗಿ ಎರಡು ಭಾಷೆಗಳಲ್ಲಿ ತಯಾರಿಸಿರುವ ‘ಐ ಲವ್‌ಯು’ ಚಿತ್ರಕ್ಕೆ ಟಾಲಿವುಡ್‌ನಲ್ಲೂ ದೊಡ್ಡ ಕ್ರೇಜ್‌ ಹುಟ್ಟಿಕೊಂಡಿದೆ. ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ- ಏಕಕಾಲಕ್ಕೆ ಮೂರು ರಾಜ್ಯಗಳಲ್ಲಿ ಉಪೇಂದ್ರ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ಚಂದ್ರ ಹೊರಟಿದ್ದಾರೆ.

ಸಿನಿಮಾ ವಿತರಣೆಗೆ ಭಾರೀ ಬೇಡಿಕೆ ಬಂದಿದೆ. ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಜೂನ್‌ 14 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಕನ್ನಡದಂತೆ ತೆಲುಗಿನಲ್ಲೂ ಆಡಿಯೋ ಹಾಗೂ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗಿದೆ.

ತೆಲುಗಿನಲ್ಲೂ ಉಪೇಂದ್ರ ಅವರ ಅಭಿಮಾನಿಗಳು ಇದ್ದಾರೆ. ಎರಡು ವರ್ಷಗಳ ನಂತರ ಅವರ ಸಿನಿಮಾ ಬರುತ್ತಿದೆ.