ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲು…

0
410

ಮಂಡ್ಯ,ಮೇ,13,2019(www.justkannada.in): ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಲುಮುರಿಯಲ್ಲಿ ನಡೆದಿದೆ.

ಮೈಸೂರಿನ ಗಾಂಧಿ ನಗರದ ಶಿವು(21), ಮಹದೇವ (20) ಮೃತಪಟ್ಟ ಯುವಕರು. ಶಿವು, ಮಹದೇವ ಸೇರಿ 6 ಜನ ಸ್ನೇಹಿತರು ಪ್ರವಾಸಕ್ಕೆ ಬಂದಿದ್ದರು. ಬಲುಮುರಿಯ ಕಾವೇರಿ ನದಿಯಲ್ಲಿ ಈಜಲು ಇಳಿದಾಗ ಇಬ್ಬರು ಯುವಕರು ಸುಳಿಗೆ ಸಿಲುಕಿ ಈ ಘಟನೆ ನಡೆದಿದೆ.

ಓರ್ವನ ಮೃತದೇಹ ಸಿಕ್ಕಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮತ್ತೊಂದು ಮೃತದೇಹಕ್ಕೆ ಹುಡುಕಾಟ ನಡೆದಿದೆ. ಈ ಕುರಿತು ಕೆ.ಆರ್.ಎಸ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Two -young men- drowned – river –Kaveri-death