Monday, September 21, 2026

BDA Apartments

ಕೇಂದ್ರದ ಬಜೆಟ್ ನಿರಾಶದಾಯಕ, ಎಲೆಕ್ಷನ್ ಬಜೆಟ್- ಸಿಎಂ ಸಿದ್ದರಾಮಯ್ಯ ಟೀಕೆ BDA JK_A...
Home Front Page ಕೇಂದ್ರದ ಬಜೆಟ್ ನಿರಾಶದಾಯಕ, ಎಲೆಕ್ಷನ್ ಬಜೆಟ್- ಸಿಎಂ ಸಿದ್ದರಾಮಯ್ಯ ಟೀಕೆ.

ಕೇಂದ್ರದ ಬಜೆಟ್ ನಿರಾಶದಾಯಕ, ಎಲೆಕ್ಷನ್ ಬಜೆಟ್- ಸಿಎಂ ಸಿದ್ದರಾಮಯ್ಯ ಟೀಕೆ.

ಬೆಂಗಳೂರು,ಫೆಬ್ರವರಿ,1,2024(www.justkannada.in):  ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಮಧ್ಯಂತರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬಜೆಟ್ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಇದೊಂದು ನಿರಾಶಾದಾಯಕ, ಎಲೆಕ್ಷನ್ ಬಜೆಟ್ ಆಗಿದೆ. ಬಜೆಟ್ ಬಗ್ಗೆ ಮಾತನಾಡುವಂತಹದ್ದು ಏನೂ ಇಲ್ಲ.ಇದೊಂದು ಬಹಳ ಚರ್ಚೆ ಮಾಡುವ ಬಜೆಟ್ ಅಲ್ಲ ಎಂದು ಹೇಳಿದರು.ಕೇಂದ್ರದ ಬಜೆಟ್ ನಿರಾಶದಾಯಕ siddaramaiah123

2024-25ನೇ ವರ್ಷದ ಮಧ್ಯಂತರ ಬಜೆಟ್ ಮುಗಿಸಿದ್ದಾರೆ. ಚುನಾವಣೆ ಇರೋದರಿಂದ ಪೂರ್ಣ ಬಜೆಟ್ ಘೋಷಣೆ ಆಗದಿರಬಹುದು. ಇಂದು 47,65,768 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Center-budget – disappointing- election -budget- CM -Siddaramaiah