Tuesday, August 4, 2026

BDA Apartments

Home Front Page ವಿಚಾರಣೆಗೆ ಹಾಜರಾಗುವಂತೆ ಡಿ.ಕೆ ಶಿವಕುಮಾರ್ ಪುತ್ರಿಗೆ ಇಡಿಯಿಂದ ಸಮನ್ಸ್…

ವಿಚಾರಣೆಗೆ ಹಾಜರಾಗುವಂತೆ ಡಿ.ಕೆ ಶಿವಕುಮಾರ್ ಪುತ್ರಿಗೆ ಇಡಿಯಿಂದ ಸಮನ್ಸ್…

ಬೆಂಗಳೂರು,ಸೆ,10,2019(www.justkannada.in): ಅಕ್ರಮ ಹಣ ವರ್ಗಾವಣೆ ಆರೋಪದಡಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಈಗಾಗಲೇ ಇಡಿ ಕಸ್ಟಡಿಯಲ್ಲಿದ್ದು ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ಡಿ,ಕೆ ಶಿವಕುಮಾರ್ ಅವರ ಪುತ್ರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಸೆಪ್ಟಂಬರ್ 12 ರಂದು ವಿಚಾರಣೆಗೆ ಹಾಜರಾಗುವಂತೆ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯಗೆ ಇಡಿ ಸಮನ್ಸ್ ನೀಡಿದೆ. ಸದಾಶಿವನಗರದಲ್ಲಿರುವ ನಿವಾಸಕ್ಕೆ ಸಮನ್ಸ್ ಅಂಟಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನ್ಯಾಷನಲ್ ಗ್ಲೋಬಲ್ ಕಾಲೇಜಿನಲ್ಲಿ ಪಾಲುದಾರಿಕೆ ಹಿನ್ನೆಲೆ ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ. ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ಸೆಪ್ಟಂಬರ್ 13 ರಂದು ಅಂತ್ಯವಾಗಲಿದೆ. ಅಂದೇ ರೋಸ್ ಅವೆನ್ಯೂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

Key words: ED –summons- DK Shivakumar’s -daughter – attend -hearing.