Wednesday, September 16, 2026

BDA Apartments

ಕುವೈತ್’ನ ಎಮಿರ್ ಶೇಖ್ ನಿಧನದ ಹಿನ್ನೆಲೆ: ಇಂದು ದೇಶಾದ್ಯಂತ ಶೋಕಾಚರಣೆ BDA JK_Adv BDA Adv
Home Front Page ಕುವೈತ್’ನ ಎಮಿರ್ ಶೇಖ್ ನಿಧನದ ಹಿನ್ನೆಲೆ: ಇಂದು ದೇಶಾದ್ಯಂತ ಶೋಕಾಚರಣೆ

ಕುವೈತ್’ನ ಎಮಿರ್ ಶೇಖ್ ನಿಧನದ ಹಿನ್ನೆಲೆ: ಇಂದು ದೇಶಾದ್ಯಂತ ಶೋಕಾಚರಣೆ

ಬೆಂಗಳೂರು, ಡಿಸೆಂಬರ್ 17, 2023 (www.justkannada.in): ಕುವೈತ್’ನ ಎಮಿರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರಿಗೆ ಗೌರವ ಸೂಚಕವಾಗಿ ಕೇಂದ್ರ ಸರ್ಕಾರವು ಇಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ಘೋಷಿಸಿದೆ.

ಕುವೈತ್ ರಾಜ್ಯದ ಅಮೀರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರು ನಿನ್ನೆ ನಿಧನರಾಗಿದ್ದರು. ಇಂದು ತ್ರಿವರ್ಣ ಧ್ವಜವನ್ನು ಭಾರತದಾದ್ಯಂತ ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ಅರ್ಧಮಟ್ಟದಲ್ಲಿ ಹಾರಿಸಲಾಗುವುದು.

ಅಗಲಿದ ಗಣ್ಯರಿಗೆ ಗೌರವದ ಸಂಕೇತವಾಗಿ, ಕೇಂದ್ರ ಸರ್ಕಾರವು ಇಂದು ಭಾರತದಾದ್ಯಂತ ಒಂದು ದಿನದ ರಾಜ್ಯ ಶೋಕಾಚರಣೆ ನಡೆಸಲು ನಿರ್ಧರಿಸಿದೆ ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಶೋಕಾಚರಣೆಯ ದಿನದಂದು ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.