Wednesday, September 16, 2026

BDA Apartments

ಮತ್ತೆ ಕೊರೊನಾ ಆತಂಕ: ಕೇರಳದಲ್ಲಿ ವೃದ್ಧ ಬಲಿ, ಕಣ್ಣೂರಿನಲ್ಲಿ ಕಟ್ಟೆಚ್ಚರ BDA JK_A...
Home Front Page ಮತ್ತೆ ಕೊರೊನಾ ಆತಂಕ: ಕೇರಳದಲ್ಲಿ ವೃದ್ಧ ಬಲಿ, ಕಣ್ಣೂರಿನಲ್ಲಿ ಕಟ್ಟೆಚ್ಚರ

ಮತ್ತೆ ಕೊರೊನಾ ಆತಂಕ: ಕೇರಳದಲ್ಲಿ ವೃದ್ಧ ಬಲಿ, ಕಣ್ಣೂರಿನಲ್ಲಿ ಕಟ್ಟೆಚ್ಚರ

ಬೆಂಗಳೂರು, ಡಿಸೆಂಬರ್ 17, 2023 (www.justkannada.in): ಕೇರಳದ ಕಣ್ಣೂರಿನಲ್ಲಿ ಕೊರೋನಾಗೆ ವೃದ್ಧ ಬಲಿಯಾಗಿದ್ದಾರೆ. ದೇಶಾದ್ಯಂತ ಕೋವಿಡ್ ಹೆಚ್ಚಳದ ಆತಂಕ ಸೃಷ್ಠಿಸಿದೆ.

ಕೇರಳದ ಕಣ್ಣೂರಿನಲ್ಲಿ ಕೋವಿಡ್ ಸೋಂಕಿನಿಂದಾಗಿ 80 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಹೀಗಾಗಿ ಕಣ್ಣೂರಿನಲ್ಲಿ ಕೆಟ್ಟೆಚ್ಚರ ವಹಿಸಲಾಗಿದೆ.

ಕೊರೋನಾ ಉಪ ತಳಿ ಜೆಎನ್.1 ಗೆ ವೃದ್ಧ ಬಲಿಯಾಗಿರುವ ವಿಷಯ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಕೋವಿಡ್ ಆತಂಕ ಸೃಷ್ಠಿಯಾಗಿದೆ.

ಕೇರಳದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಅಲ್ಲಿನ ಸರಕಾರ ಹೆಚ್ಚಿನ ನಿಗಾ ವಹಿಸಿದೆ.