ಬೆಂಗಳೂರು,ಸೆಪ್ಟಂಬರ್,16,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಎ14 ಪ್ರದೋಷ್ ಮಾಫಿ ಸಾಕ್ಷಿ ಆದೇಶ ಮುಂದೂಡಿಕೆ ಮಾಡಲು ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ನಿರಾಕರಿಸಿದೆ.
ಎ14 ಪ್ರದೋಷ್ ಮಾಫಿ ಸಾಕ್ಷಿ ಆದೇಶ ಮುಂದೂಡಿಕೆ ಮಾಡುವಂತೆ ಕೋರಿ ಆರೋಪಿ ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ವಜಾಗೊಳಿಸಿದ್ದಾರೆ.
ಅಲ್ಲದೆ ಪ್ರದೋಷ್ ಮಾಫಿ ಸಾಕ್ಷಿಗೆ ನ್ಯಾಯಾಲಯ ಮತ್ತೆ ಒಪ್ಪಿಗೆ ನೀಡಿದೆ. ಮಾಫಿ ಸಾಕ್ಷಿಗೆ ನಿಮಗೆ ಒಪ್ಪಿಗೆ ಇದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದು ಒಪ್ಪಿಗೆ ಇದೆ ಎಂದು ಆರೋಪಿ ಪ್ರದೋಷ್ ತಿಳಿಸಿದ್ದು ಈ ಮೂಲಕ ಮತ್ತೆ ನಟ ದರ್ಶನ್ ಗೆ ಹಿನ್ನೆಡೆಯಾಗಿದೆ.
Key words: Renukaswamy Murder case, Court, Rejects, Darshan’s, Lawyer, Plea







