ಮಕ್ಕಳ ಕೃತಿಗಳ ಭಾಷಾಂತರದಲ್ಲಿ ಆಸಕ್ತಿ ಇರುವ ಉದಯೋನ್ಮುಖರಿಗಾಗಿ 7 ವಾರಗಳ ಕಾರ್ಯಗಾರ: ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿ.

ಬೆಂಗಳೂರು,ಡಿಸೆಂಬರ್,16,2023(www.justkannada.in): ‘ಪರಾಗ್’ ಸಂಸ್ಥೆ ‘ಬಹುರೂಪಿಯ ಜೊತೆ ಸೇರಿ ಮಕ್ಕಳ ಕೃತಿಗಳ ಭಾಷಾಂತರದಲ್ಲಿ ಆಸಕ್ತಿ ಇರುವ ಉದಯೋನ್ಮುಖರಿಗೆ ಕಾರ್ಯಗಾರ ಹಮ್ಮಿಕೊಂಡಿದೆ.

7 ವಾರಗಳು( ಮೂರು ದಿನ ವಸತಿ ಸಹಿತ ಕಾರ್ಯಗಾರ ಮತ್ತು ತಜ್ಞರ ಮಾರ್ಗದರ್ಶನದಲ್ಲಿ 6 ವಾರಗಳ ಸ್ವತಂತ್ರ ಭಾಷಾಂತರ ಕಾರ್ಯ) ಕಾರ್ಯಗಾರ ನಡೆಯಲಿದೆ. 2024ರ ಜನವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ವಸತಿ ಸಹಿತ ಕಾರ್ಯಗಾರ ನಡೆಯಲಿದೆ.   ಮಕ್ಕಳ ಕೃತಿಗಳನ್ನ  ಅನುವಾದಿಸಲು ಆಸಕ್ತಿ ಇರುವವರಿಗೆ ಉದಯೋನ್ಮುಖ ಬರಹಗಾರರಿಗೆ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.

3 ದಿನಗಳ  ಈ ವಸತಿ ಸಹಿತ ಕಾರ್ಯಗಾರದಲ್ಲಿ ಸಹ ಶಿಬಿರಾರ್ಥಿಗಳು ಮತ್ತು ತಜ್ಞರ ಜೊತೆ ಸಕ್ರಿಯವಾಗಿ ಚರ್ಚಯಲ್ಲಿ ಭಾಗವಹಿಸಬೇಕು.  ಕಾರ್ಯಗಾರದಲ್ಲಿ ಪಾಲ್ಗೊಳ್ಳಲು 2023 ಡಿಸೆಂಬರ್ 20 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. 2024 ಜನವರಿ 5 ರಂದು ಆಯ್ಕೆಯಾದ ಶಿಬಿರಾರ್ಥಿಗಳ ಘೋಷಣೆಯಾಗಲಿದೆ. 2024ರ ಜನವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ವಸತಿ ಸಹಿತ ಕಾರ್ಯಗಾರ ನಡೆಯಲಿದೆ. 2024 ಮಾರ್ಚ್ 7 ಭಾಷಾಂತರಿಸಿದ ಹಸ್ತಪ್ರತಿಯನ್ನ ಸಲ್ಲಿಸಲು ಕೊನೆಯ ದಿನವಾಗಿದೆ.

ಕಾರ್ಯಗಾರದ ಮಾರ್ಗದರ್ಶಕರು..

ಕನ್ನಡ ಬರಹಗಾರ, ಅನುವಾದಕ ಎಂ. ಅಬ್ದುಲ್ ರೆಹಮಾನ್ ಪಾಷ

ಅನುಭವಿ ಪ್ರಕಾಶಕ, ಸಂಪಾದಕ ಪತ್ರಕರ್ತ ಜಿ.ಎನ್ ಮೋಹನ್.

ಗ್ರಂಥಾಲಯ ಶಿಕ್ಷಣ ತಜ್ಞ ತೇಜಸ್ವಿ ಶೀವಾನಂದ್

ಇನ್ನೂ ವಿವರ ಬೇಕಿದ್ದರೆ ವಾಟ್ಸ್ ಅಪ್ ನಲ್ಲಿ 70191 82729 ಸಂಪರ್ಕಿಸಿ

Key words:  7-week -workshop – emerging –artists- interested –translating- children’s- works: