Tuesday, September 1, 2026

BDA Apartments

Home Front Page ಯತ್ನಾಳ್ ಮಾಡಿರುವ ಗಂಭೀರ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ  ಕೊಡಲಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಯತ್ನಾಳ್ ಮಾಡಿರುವ ಗಂಭೀರ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ  ಕೊಡಲಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ, ,ಡಿಸೆಂಬರ್,9,2023(www.justkannada.in):   ಸಿಎಂ ವೇದಿಕೆಯಲ್ಲಿ ಐಸಿಸ್ ನಂಟಿರುವ ವ್ಯಕ್ತಿ ಇದ್ದ ಎಂದು ಆರೋಪಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಫೋಟೊ ಬಿಡುಗಡೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯತ್ನಾಳ್ ಅವರು ತನ್ವೀರ್ ಕುರಿತು ಯಾವ ಕಾರಣದಿಂದ ಹೇಳಿದ್ದಾರೆ ಅನ್ನೋದು ಮುಖ್ಯ. ಯತ್ನಾಳ್ ಮಾಡಿರುವ ಗಂಭೀರ ಆರೋಪಕ್ಕೆ ಸಿಎಂ ಸ್ಪಷ್ಟನೆ ಕೊಡಬೇಕು. ನೀವು ಅಲ್ಲಿಗೆ ಹೋಗಬಾರದು ಅಂತ ಸಿಎಂಗೆ ಪೊಲೀಸರು ಹೇಳಿದ್ದಾಗಿ ಯತ್ನಾಳ್ ಆರೋಪಿಸಿದ್ದಾರೆ. ತನ್ವೀರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ತನಿಖಾ ಸಂಸ್ಥೆಗಳು ಏನು ಹೇಳುತ್ತೋ ಅದನ್ನು ನಾವು ಪರಿಗಣಿಸಬೇಕು. ಸಿದ್ದರಾಮಯ್ಯನವರು ಈ ರೀತಿ ಹೇಳಿಕೆ ಕೊಡೋದು ಅವರ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ. ಸಿದ್ದರಾಮಯ್ಯ ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಲಿ ಎಂದರು.

ಯತ್ನಾಳ್ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟು ತನ್ವೀರ್ ಪೀರ್ ಜೊತೆ ಪ್ರಧಾನಿ ಮೋದಿ ಇದ್ದ ಫೋಟೊ ಬಿಡುಗಡೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಪ್ರಧಾನಿಗಳು ಭೇಟಿಯಾದ ಕಾರ್ಯಕ್ರಮದಲ್ಲಿ ತನ್ವೀರ್ ಭಾಗಿಯಾಗಿರುವ ಫೋಟೋ ಹಾಕಿದ್ದಾರೆ. ಅದು ಸರಿ ಇದ್ದರೂ ಇರಬಹುದು. ಆ ಸಂದರ್ಭದಲ್ಲಿ ತನ್ವೀರ್ ಗೆ ಐಸಿಎಸ್ ನಂಟು ಇತ್ತು ಇಲ್ಲವೋ ಗೊತ್ತಿಲ್ಲ. ಈಗ ಮೋದಿ ಅವರ ಹೆಸರು ತೆಗೆದುಕೊಂಡು ಬಯ್ಯದೇ ಇದ್ದಲ್ಲಿ ಸಿದ್ದರಾಮಯ್ಯಗೆ ಊಟ ರುಚಿಸುವುದಿಲ್ಲ ಎಂದು ಕಿಡಿಕಾರಿದರು.

Key words: CM Siddaramaiah – clarify -serious allegations – Yatnal – Union Minister-Prahlad Joshi.