Saturday, October 17, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ನಮಗೂ ಟೈಮ್ ಬರುತ್ತೆ, ಅದೇ ಕಾಲಿನ ಧೂಳಿನಲ್ಲಿ ನೀವು ಕೊಚ್ಚೋಗ್ತೀರಿ- ಬಿ.ನಾಗೇಂದ್ರ ವಾಗ್ದಾಳಿ

ನಮಗೂ ಟೈಮ್ ಬರುತ್ತೆ, ಅದೇ ಕಾಲಿನ ಧೂಳಿನಲ್ಲಿ ನೀವು ಕೊಚ್ಚೋಗ್ತೀರಿ- ಬಿ.ನಾಗೇಂದ್ರ ವಾಗ್ದಾಳಿ

ಬಳ್ಳಾರಿ, ಸೆಪ್ಟಂಬರ್,1,2026 (www.justkannada.in): ನಾಗೇಂದ್ರ ನನ್ನ ಕಾಲಿನ ಧೂಳಿಗೆ ಸಮ ಅಂತಾ ಹೇಳುತ್ತಾರೆ. ನಮಗೂ ಟೈಮ್ ಬರುತ್ತೆ ಅದೇ ಧೂಳಿನಲ್ಲಿ ನೀವು ಕೊಚ್ಚಿ ಹೋಗುತ್ತೀರಿ ಎಂದು  ಮಾಜಿ ಸಚಿವರಾದ ಶ್ರೀರಾಮುಲು, ಜನಾರ್ಧನರೆಡ್ಡಿ ವಿರುದ್ದ ಮಾಜಿ ಸಚಿವ ಬಿ.ನಾಗೇಂದ್ರ ವಾಗ್ದಾಳಿ ನಡೆಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ನಾಗೇಂದ್ರ, ಪಕ್ಷಕ್ಕೆ ಮುಜುಗರ ಆಗಬಾರದು ಎಂದು ರಾಜೀನಾಮೆ ನೀಡಿದ್ದೇನೆ. ನಮ್ಮ ಪಕ್ಷ ನಮಗೆ ದೇವಸ್ಥಾನ ಇದ್ದಂಗೆ. ದೇವಸ್ಥಾನಕ್ಕೆ ಮುಜುಗರ ಆಗಬಾರದು ಅಂತಾ ರಾಜೀನಾಮೆ ನೀಡಿದ್ದೇನೆ ಎಂದರು.ನಮಗೂ ಟೈಮ್ ಬರುತ್ತೆ, ಅದೇ ಕಾಲಿನ sriramulu sriramulu 1

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಎಂದು ಹೇಳಬಾರದು.  ಯೂನಿಯನ್ ಬ್ಯಾಂಕ್ ಹಗರಣ  ಎಂದು ಹೇಳಬೇಕು.  ನನ್ನ ನಂಬಿದ ಜನರ ಬಗ್ಗೆ ನಾನು ಕಣ್ಣೀರು ಹಾಕಿದ್ದು.  ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಕ್ಕೆ ನಾನು ಕಣ್ಣೀರು ಹಾಕಿಲ್ಲ. ನಾನು ತಪ್ಪು ಮಾಡಿದ್ದರೇ ಶಿಕ್ಷೆ ಅನುಭವಿಸಲು ಸಿದ್ದನಿದ್ದೇನೆ. ಪಾದಯಾತ್ರೆ ಮೂಲಕ ಒಂದು ಸುಳ್ಳನ್ನು ತೆಗೆದುಕೊಂಡು  ಬರುತ್ತಿದ್ದಾರೆ. ಏನೇನೋ ವಿಚಾರಗಳನ್ನ ಹೇಳಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿ. ನಾಗೇಂದ್ರ  ಕಿಡಿಕಾರಿದರು.ನಮಗೂ ಟೈಮ್ ಬರುತ್ತೆ jk02_new jk02 new

ಶಂಬೂಕ ನನ್ನ ದೃಷ್ಠಿಯಲ್ಲಿಒಬ್ಬ ಮಹಾನ್ ತಪಸ್ವಿ.   ಬಿಜೆಪಿಯವರದ್ದು ಮನುವಾದ ಮನುಸ್ಮೃತಿಯೂ ಹೌದು. ಜನಾರ್ಧನ ರೆಡ್ಡಿ ಬಹಿರಂಗ ಚರ್ಚೆಗೆ ಬರಲಿ. ಈಗಾಗಲೇ ಒಬ್ಬ ವಾಲ್ಮೀಕಿ ನಾಯಕನನ್ನು ಮುಗಿಸಿದ್ದೀಯಾ.  ನಾಗೇಂದ್ರ ನನ್ನ ಕಾಲಿನ ಧೂಳಿಗೆ ಸಮಾನ ಅಂತಾ ಹೇಳುತ್ತಾರೆ ಹೌದು  ನಾನು  ನಿಮ್ಮ ಕಾಲಿನ ಧೂಳಿಗೆ ಸಮಾನೇ. ನಮಗೂ ಟೈಮ್ ಬರುತ್ತೆ ಅದೇ ಧೂಳಿನಲ್ಲಿ ನೀವು ಕೊಚ್ಚೋಗ್ತೀರಿ.  ಸುಳ್ಳು ನಮ್ಮಲ್ಲಿ ಇಲ್ಲವಯ್ಯ ಸುಳ್ಣೇ ನಮ್ಮ ದೇವರು. ಸುಳ್ಳುಗಳ ಸರದಾರರು ಅಂದರೇ ಜನಾರ್ಧನ ರೆಡ್ಡಿ ಶ್ರೀರಾಮುಲು ಎಂದು ಗುಡುಗಿದರು.

Key words: Former Minister, B. Nagendra, Janardhana reddy, Sriramulu