Friday, October 16, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಅಧಿಕಾರದ ದರ್ಪ ಇಳಿಸಲು, ಭ್ರಷ್ಟ ಸರ್ಕಾರ ಬುಡ ಸಮೇತ ಕಿತ್ತು ಹಾಕಲು ಪಾದಯಾತ್ರೆ- ಬಿವೈ ವಿಜಯೇಂದ್ರ

ಅಧಿಕಾರದ ದರ್ಪ ಇಳಿಸಲು, ಭ್ರಷ್ಟ ಸರ್ಕಾರ ಬುಡ ಸಮೇತ ಕಿತ್ತು ಹಾಕಲು ಪಾದಯಾತ್ರೆ- ಬಿವೈ ವಿಜಯೇಂದ್ರ

ರಾಯಚೂರು,ಸೆಪ್ಟಂಬರ್,1,2026 (www.justkannada.in): ಅಧಿಕಾರದ ದರ್ಪ ಇಳಿಸಲು ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನ ಬುಡ ಸಮೇತ ಕಿತ್ತು ಹಾಕಲು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ರಾಯಚೂರಿನ ಲಿಂಗಸೂಗೂರಿನಲ್ಲಿ ಬಳ್ಳಾರಿ ಚಲೋ ಪಾದಯಾತ್ರೆಗೆ ಚಾಲನೆ ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ಬಳ್ಳಾರಿ ಚಲೋ ಹೆಸರಿನಲ್ಲಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ.  ವಾಲ್ಮೀಕಿ ನಿಗಮ ಹಗರಣ ಸಂಬಂಧ ಸದನದೊಳಗೆ ಹೋರಾಟ ಮಾಡಿದ್ದೇವೆ.  ಸದನದಲಲಿ ಬಿಜೆಪಿ ಜೆಡಿಎಸ್ ಜಂಟಿಯಾಗಿ ಹೋರಾಟ ಮಾಡಿದವು.  ನಮ್ಮ ಹೋರಾಟಕ್ಕೆ ಮಣಿದು ನಾಗೇಂದ್ರ ರಾಜೀನಾಮೆ ನೀಡಿದರು.  ನಾವು ನಾಟಕ ಮಾಡಲು ಪಾದಯಾತ್ರೆ ಮಾಡುತ್ತಿಲ್ಲ. ರಾಜ್ಯ ಸರ್ಕರದ ಭ್ರಷ್ಟಾಚಾರದ ವಿರುದ್ದ ಪಾದಯಾತ್ರೆ ಮಾಡುತ್ತಿದ್ದೇವೆ. ಡಿಕೆಶಿ ಸರ್ಕಾರ ಭ್ರಷ್ಟರಿಂದ ಭ್ರಷ್ಟರಿಗಾಗಿ ಭ್ರಷ್ಟರಿಗೋಸ್ಕರ ಸರ್ಕಾರ ಎಂದು ಗುಡುಗಿದರು. ಅಧಿಕಾರದ ದರ್ಪ ಇಳಿಸಲು, ಭ್ರಷ್ಟ byv

ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ಹಣ ವರ್ಗಾವಣೆಯಾಗಿದೆ.  ಎಸ್ ಸಿ,  ಎಸ್ ಟಿ ಜನಾಂಗಕ್ಕೆ ಮೀಸಲಿಟ್ಟಿದ್ದ ಅನುದಾನ ವರ್ಗಾವಣೆ ಆಗಿದೆ. ಆ ಹಣ ಮತ್ತೆ ಎಸ್ ಸಿ,  ಎಸ್ ಟಿ ಅಭಿವೃದ್ದಿಗೆ ಮರುಬಳಕೆಯಾಗಬೇಕು ಭ್ರಷ್ಟ ಸರ್ಕಾರವನ್ನ ಬುಡಸಮೇತ ಕಿತ್ತು ಹಾಕಲು ಪಾದಯಾತ್ರೆ ಮಾಡುತ್ತಿದ್ದೇವೆ.  ಅಧಿಕಾರದ ದರ್ಪ ಇಳಿಸುವ ಶಕ್ತಿ ಪಾದಯಾತ್ರೆಗೆ ಇದೆ. 187 ಕೋಟಿ ರೂ  ವಾಪಸ್ ನಿಗಮಕ್ಕೆ ಬರುವವರೆಗೂ ಹೋರಾಟ  ಮಾಡುತ್ತೇವೆ ಎಂದರು.ಅಧಿಕಾರದ ದರ್ಪ ಇಳಿಸಲು jk02_new jk02 new

Key words:  BJP, Padayatre, corrupt government, BY Vijayendra