ಹಿರಿಯ ನಟಿ ಲೀಲಾವತಿ ಹೆಸರು ಉಳಿಸಲು ಏನ್ ಮಾಡಬೇಕೋ  ಅದನ್ನು ನಮ್ಮ ಸರ್ಕಾರ  ಮಾಡುತ್ತೆ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಡಿಸೆಂಬರ್,9,2023(www.justkannada.in): ಹಿರಿಯ ನಟಿ ಲೀಲಾವತಿ ಅವರ  ಹೆಸರು ಉಳಿಸಲು ಏನ್ ಮಾಡಬೇಕೋ  ಅದನ್ನು ನಮ್ಮ ಸರ್ಕಾರ ಮಾಡುತ್ತೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

ವಯೋಸಹಜ ಅನಾರೋಗ್ಯದಿಂದ ನಿಧನರಾದ ಹಿರಿಯ ನಟಿ ಲೀಲಾವತಿ ಅವರ  ಪಾರ್ಥೀವ ಶರೀರವನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದರು.

ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಲೀಲಾವತಿ ಅವರು  600 ಕ್ಕೂ ಹೆಚ್ಚು ಸಿನಿಮಾ ಅಭಿನಯ ಮಾಡಿದ್ದಾರೆ. 40 ವರ್ಷಗಳಿಂದ ನಾನು ಅವರ ಸಿನಿಮಾ ನೋಡಿದ್ದೇನೆ. ಎರಡೂ ವಾರದ ಹಿಂದೆ ನಮ್ಮ‌ ಮನೆಗೆ ಬಂದಿದ್ದರು. ಪಶುವೈದ್ಯ ಶಾಲೆ ಉದ್ಘಾಟನೆಗೆ ಬರಬೇಕೆಂದು   ಮನವಿ ಮಾಡಿದ್ದರು. ಹೀಗಾಗಿ ಪಶು ವೈದ್ಯಶಾಲೆ ಉದ್ಘಾಟನೆಗೆ ಹೋಗಿದ್ದೆ.. ವಿನೋದ್ ರಾಜ್ ಇಡೀ ಜೀವನ ತನ್ನ ತಾಯಿ ಸೇವೆಯನ್ನು ಮಾಡಿದ್ದಾರೆ. ಲೀಲಾವತಿ  ಅವರ ಹೆಸರು ಉಳಿಯೋಕೆ ಏನ್ ಮಾಡಬೇಕೋ ಅದನ್ನು ನಮ್ಮ ಸರ್ಕಾರ ಮಾಡುತ್ತೆ. ಈಗ ಹೇಳೋಕೆ ಹೋಗಲ್ಲ, ನಾವೆಲ್ಲರೂ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.

Key words: Our government -save – name –senior-actress- Leelavati – DCM- DK Shivakumar