Wednesday, July 29, 2026

BDA Apartments

Home Front Page ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ.

ತಿರುಪತಿ,ನವೆಂಬರ್,27,2023(www.justkannada.in):  ಚುನಾವಣಾ ಪ್ರಚಾರಕ್ಕಾಗಿ ತೆಲಂಗಾಣಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ ಮೋದಿ ಅವರು ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.

ಮೂರು ದಿನಗಳ ಕಾಲ ತೆಲಂಗಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಿರುಪತಿಗೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಬೆಳಗ್ಗೆ 8 ರಿಂದ 8.45 ರವರೆಗೆ ದೇವಾಲಯದೊಳಗೆ ಇದ್ದ ಮೋದಿ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ತೆಲಂಗಾಣ ಸಾರ್ವತ್ರಿಕಾ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ  ಹಲವು ಸಮಾವೇಶ ಹಾಗೂ ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಪೈಕಿ ತೆಲಂಗಾಣ ರಾಜ್ಯದ ಚುನಾವಣೆ ಕೊನೆಯದಾಗಿದ್ದು, ಮಧ್ಯಪ್ರದೇಶ, ರಾಜಸ್ಥಾನ ಬಳಿಕ ಇದೀಗ ಕೇಸರಿ ಪಡೆ ತೆಲಂಗಾಣದತ್ತ ಗಮನಹರಿಸಿದೆ ಎ‍ನ್ನಲಾಗಿದೆ.

Key words: PM- Modi- darshana – Tirupati-Timmappa