ಸಿಎಂ ಜನತಾದರ್ಶನ ಆರಂಭ: ಸರತಿ ಸಾಲಿನಲ್ಲಿ ನಿಂತು ಮನವಿ ಸಲ್ಲಿಸುತ್ತಿರುವ ಜನರು.

ಬೆಂಗಳೂರು,ನವೆಂಬರ್,27,2023(www.justkannada.in):  ಇಂದು ಇಡೀ ದಿನ ಸಿಎಂ ಸಿದ್ದರಾಮಯ್ಯ ಜನರಿಂದ ಸಮಸ್ಯೆ ಆಲಿಸಲು ಜನತಾ ದರ್ಶನ ನಡೆಸುತ್ತಿದ್ದು ಇದೀಗ ಜನತಾ ದರ್ಶನ ಆರಂಭವಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಜನತಾ ದರ್ಶನ ನಡೆಯುತ್ತಿದ್ದು,  ಕಚೇರಿಯ ಮುಂಭಾಗ ಜನರು ಸರತಿ ಸಾಲಿನಲ್ಲಿ ನಿಂತು ಸಿಎಂ ಸಿದ್ದರಾಮಯ್ಯರಿಗೆ ತಮ್ಮ ಮನವಿಯನ್ನ ಸಲ್ಲಿಸುತ್ತಿದ್ದಾರೆ.

ಸಿಎಂ ಜನತಾದರ್ಶನದಲ್ಲಿ 20  ಕೌಂಟರ್ ಗಳನ್ನ ಓಪನ್ ಮಾಡಲಾಗಿದ್ದು, 1000ಕ್ಕೆ ಹೆಚ್ಚು  ಅಧಿಕಾರಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಚೇತನರು ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್  ತೆರೆಯಲಾಗಿದೆ.

Key words: CM Siddaramaiah- Janatadarshan –begins- People